IND vs ENG : ಟೀಮ್‌ ಇಂಡಿಯಾ ಆಟಗಾರ ಶುಭಮನ್‌ ಗಿಲ್‌ 50ನೇ ಇನ್ನಿಂಗ್ಸ್‌ ನಲ್ಲಿ ವಿಶ್ವದಾಖಲೆ..!

ಶುಭಮನ್‌ ಗಿಲ್
ಶುಭಮನ್‌ ಗಿಲ್
ಕ್ರಿಕೆಟ್‌

Shubman Gil:

ಇಂಗ್ಲೆಂಡ್ ವಿರುದ್ಧದ ಅಹ್ಮದಾಬಾದ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿರುವ ಶುಭಮನ್ ಗಿಲ್ ಅವರು ಇದೀಗ ಏಕದಿನ ಕ್ರಿಕೆಟ್ ನಲ್ಲಿ ಅತಿವೇಗವಾಗಿ 2500 ರನ್ ಪೂರೈಸಿದ ಆಟಗಾರ ಎಂಬ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದು ಅವರ 50ನೇ ಇನ್ನಿಂಗ್ಸ್ ನಲ್ಲಿ ಬಂದಿದೆ. ಇನ್ನು 50ನೇ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ಗೌರವಕ್ಕೂ ಅವರು ಇದೀಗ ಪಾತ್ರರಾಗಿದ್ದಾರೆ.

ಶುಭಮನ್ ಗಿಲ್ ಅವರಿಗೆ 2500 ರನ್ ಪೂರೈಸಲು ಬುಧವಾರ 25 ರನ್ ಗಳ ಅವಶ್ಯಕತೆಯಿತ್ತು. ಗಸ್ ಆಟ್ಕಿನ್ಸನ್ ಎಸೆದ ಇನ್ನಿಂಗ್ಸ್ ನ 10ನೇ ಓವರ್ ನ ಐದನೇ ಎಸತವನ್ನು ಬೌಂಡರಿಗಟ್ಟುವ ಮೂಲಕ ಅವರು ಈ ಸಾಧನೆ ಮಾಡಿದರು. ಈ ಮೊದಲು ಈ ವಿಶ್ವದಾಖಲೆ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಅವರ ಹೆಸರಲ್ಲಿತ್ತು. ಅವರು 53 ಇನ್ನಿಂಗ್ಸ್ ಗಳಲ್ಲಿ ಈ ವಿಕ್ರಮ ಸಾಧಿಸಿದ್ದರು. ಶುಭಮನ್ ಗಿಲ್ ಅವರು ಅದಕ್ಕೂ 3 ಇನ್ನಿಂಗ್ಸ್ ಕಡಿಮೆ ಆಟವಾಡಿಯೇ ಈ ಸಾಧನೆ ಮಾಡಿದ್ದಾರೆ. ಜೊತೆಗೆ ಮೊದಲ 50 ಇನ್ನಿಂಗ್ಸ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಯನ್ನೂ ಅವರು ಬರೆದಿದ್ದಾರೆ. ಇನ್ನು ಅತಿ ಕಡಿಮೆ ಇನ್ನಿಂಗ್ಸ್ ನಲ್ಲಿ 25ಕ್ಕೂ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನೂ ಅವರು ನಿರ್ಮಿಸಿದ್ದಾರೆ.

ಭಾರತೀಯರಲ್ಲಿ ಈ ದಾಖಲೆ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿತ್ತು. ಅವರು 60 ಇನ್ನಿಂಗ್ಸ ನಲ್ಲಿ ಈ ಸಾಧನೆ ಮಾಡಿದ್ದರು. 68 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದ ವಿರಾಟ್ ಕೊಹ್ಲಿ ಮತ್ತು ನವಜ್ಯೋತ್ ಸಿಂಗ್ ಸಿಧು ಅವರು ಈ ಜಂಟಿಯಾಗಿ 3ನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ ಅವರು 69 ಇನ್ನಿಂಗ್ಸ್ ಗಳಲ್ಲಿ ಮತ್ತು ಶಿಖರ್ ಧವನ್ 72 ಇನ್ನಿಂಗ್ಸ್ ಗಳಲ್ಲಿ 2500 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

Author:

...
Editor

ManyaSoft Admin

Ads in Post
share
No Reviews