2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದೆ. ಮತ್ತೊಂದು ಸೆಮಿಫೈನಲ್ ನಾಳೆ ನಡೆಯಲಿದ್ದು, ನ್ಯೂಜಿಲೆಂಡ್ ಮತ್ತು ಆಫ್ರಿಕಾ ತಂಡ ಮುಖಾಮುಖಿಯಾಗುತ್ತಿವೆ.
ಈ ಎರಡು ಪಂದ್ಯಗಳ ವಿಜೇತರು ಮಾರ್ಚ್ 9 ರಂದು ನಡೆಯುವ ಅಂತಿಮ ಪಂದ್ಯದಲ್ಲಿ ಸ್ಪರ್ಧಿಸುತ್ತಾರೆ. ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಮಾರ್ಚ್ 9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಐಸಿಸಿ ಟೂರ್ನಿಗಳಲ್ಲಿ ನಾಲ್ಕನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಕೊನೆಯ ಬಾರಿ ಟಿ20 ವಿಶ್ವಕಪ್ 2024 ಸೂಪರ್ 8 ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕು ಬಾರಿ ಮುಖಾಮುಖಿಯಾಗಿವೆ.
2023ರ ಏಕದಿನ ವಿಶ್ವಕಪ್ ಫೈನಲ್ ಸೋಲು, ಯಾರ್ ತಾನೇ ಮರೆಯೋಕೆ ಸಾಧ್ಯ ಹೇಳಿ? ತವರಿನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ತೀವ್ರ ಮುಖಭಂಗ ಅನುಭವಿಸಿತು. ಅಂದು ಕೋಟ್ಯಾಂತರ ಭಾರತೀಯರ ಹೃದಯ, ಛಿದ್ರ ಛಿದ್ರಗೊಂಡಿತು. ಆದರೀಗ ಆ ಸೇಡನ್ನು ತೀರಿಸಿಕೊಳ್ಳುವ ಸಮಯ ಬಂದಿದೆ. ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ, ಆಸಿಸ್ ಉಡೀಸ್ ಮಾಡೋಕೆ ರೆಡಿಯಾಗಿ ನಿಂತಿದೆ.