ಕೊರಟಗೆರೆ: ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿರಾತಕ | ಕೇವಲ 8 ಗಂಟೆಗಳಲ್ಲಿ ಆರೋಪಿ ಖೆಡ್ಡಾಗೆ..!

ಎರಡು ಬೈಕ್‌ ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿರುವುದು.
ಎರಡು ಬೈಕ್‌ ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿರುವುದು.
ತುಮಕೂರು

ಕೊರಟಗೆರೆ:

ಮನೆ ಮುಂದೆ ನಿಂತಿದ್ದ ಬೈಕ್‌ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟು ಎಸ್ಕೇಪ್‌ ಆಗಿದ್ದ ಕಿರಾತಕನನ್ನು ಪೊಲೀಸರು ಕೇವಲ 8 ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊರಟಗೆರೆ ಪಟ್ಟಣದ ಹೊರವಲಯದ  ಹನುಮಂತಪುರದ ಡಿಗ್ರಿ ಕಾಲೇಜಿನ ಪಕ್ಕದಲ್ಲಿ ಮನೆ ಮುಂದೆ ನಿಂತಿದ್ದ ಎರಡು ಬೈಕ್‌ಗಳಿಗೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿ ಬೆಂಕಿ ಇಟ್ಟಿದ್ದ. ಬೆಂಕಿಯ ಕೆನ್ನಾಲಗೆಗೆ ಎರಡು ಬೈಕ್‌ಗಳು ಹಾಗೂ ಅಂಗಡಿ ಮುಂಭಾಗದ ಶೀಟ್‌ಗಳು ಸುಟ್ಟು ಭಸ್ಮವಾಗಿತ್ತು. ಕಿರಾತಕನ ಕೃತ್ಯಕ್ಕೆ  ಕೊರಟಗೆರೆ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದರು. 

ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಬೈಕ್‌ಗಳು ಹೊತ್ತಿ ಉರಿಯುತ್ತಿರೋದನ್ನು ವಾಹನ ಮಾಲೀಕರು ಕಂಡು ಒಂದು ಕ್ಷಣ ಬೆಚ್ಚಿ ಬಿದ್ದರು. ಕೂಡಲೇ ಅಂಗಡಿ ಮಾಲೀಕರಿಗೆ ವಿಷಯ ಮುಟ್ಟಿಸಿ ಮನೆಯ ಮಹಡಿಯಿಂದ ಕೆಳಗೆ ಬರುವಷ್ಟರಲ್ಲಿ ಎರಡು ವಾಹನಗಳು ಸುಟ್ಟು ಕರಕಲಾಗಿವೆ. ಬೆಂಕಿಗೆ ಅಂಗಡಿ ಮುಂದಿದ್ದ ಶೀಟ್‌ಗಳು ಸುಟ್ಟುಹೋಗಿವೆ, ಅಲ್ಲದೇ ಮಹಡಿ ಮೇಲಿದ್ದ ಮನೆಗೆ ಬೆಂಕಿ ಆವರಿಸಿದೆ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಇನ್ನು ಕಿರಾತಕ ಬೆಂಕಿ ಹಚ್ಚಿರುವ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಜಾಶಕ್ತಿ ಟಿವಿಗೆ ಲಭ್ಯವಾಗಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ‌ಕೊರಟಗೆರೆ PSI ಚೇತನ್‌ಗೌಡ ಪರಿಶೀಲನೆ ನಡೆಸಿದರು. ಆರೋಪಿ ವೈಯಕ್ತಿಕ ದ್ವೇಷದ ಜಿದ್ದಿಗೆ ದ್ವಿಚಕ್ರ ವಾಹನಗಳಿಗೆ ಬೆಂಕಿಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಹೆಡೆಮುರಿ ಕಟ್ಟಲು ಮುಂದಾದರು. ‌ಕೊರಟಗೆರೆ PSI ಚೇತನ್‌ಗೌಡ, ಕ್ರೈಂ ಸಿಬ್ಬಂದಿಗಳಾದ ದೊಡ್ಡಲಿಂಗಯ್ಯ ಮತ್ತು ಮೋಹನ್‌ ನೇತೃತ್ವದ ತಂಡ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಕೇವಲ 8 ಗಂಟೆಗಳಲ್ಲೇ ಆರೋಪಿ ಕಾರ್ತಿಕ್‌ನನ್ನು ಬಂಧಿಸುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಸ್ವಿಪ್ಟ್‌ ಕಾರನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

Author:

share
No Reviews