ಕರ್ನಾಟಕವು ಕಾಫಿ ಬೀಜಗಳ ದೊಡ್ಡ ರಪ್ತುದಾರ ರಾಜ್ಯವಾಗಿದೆ.ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅತ್ಯತ್ತಮ ಕಾಫಿಯನ್ನು ಬೆಳೆಯಲಾಗುತ್ತದೆ. ಕನ್ನಡಿಗರಿಗೆ ಕಾಫಿ ಪ್ರಮುಝ ಪಾನೀಯವಾಗಿದೆ. ಫಿಲ್ಟರ್ ಕಾಫಿ ಕಾಫಿಯ ಅತ್ಯಂತ ಜನಪ್ರಿಯ ರೂಪವಾಗಿದೆ.
ಕಾಫಿ ಪುಡಿಯ ಸಾರವನ್ನು ಹೀರಿ ಡಿಕಾಕ್ಷನ್ ಪಡೆಯಲು ವಿಶೇಷ ಪಾತ್ರೆ ಬಳಸಲಾಗುತ್ತದೆ. ಈ ಪಾತ್ರೆಯಲ್ಲಿ ಎರಡು ಹಂತವಿದ್ದು ಮೇಲಿನ ಭಾಗದ ಬುಡದಲ್ಲಿ ಸಣ್ನ ಅಂದ್ರಗಳಿದ್ದು ಕಾಫಿ ಪುಡಿ ಮತ್ತು ಕುದಿಯುವ ನೀರನ್ನು ಸುರಿದಾಗ ಹಂತ ಹಂತವಾಗಿ ಸೀಸಿದ ಕಾಫಿ ದ್ರವ ಕೆಳಗಿನ ಭಾಗದಲ್ಲಿ ಶೇಖರಣೆಯಾಗುತ್ತದೆ. ಇದನ್ನು ಡಿಕಾಕ್ಷನ್ ಎಂದು ಕರೆಯಲಾಗುತ್ತದೆ.
ಫಿಲ್ಟರ್ ಕಾಫಿಯನ್ನು ತಯಾರಿಸಲು ಮೇಲೆ ಮಾಡಿದ ಡಿಕಾಕ್ಷನ್ ನ ಒಂದು ಸಣ್ಣ ಭಾಗವನ್ನು ಬಿಸಿ ಹಾಲಿನೊಂದಿಗೆ ಬೆರೆಸಲಾಗುತ್ತದೆ.ಡಿಕಾಕ್ಷನ್ ಸಾಂದ್ರತೆ,ಹಾಲಿನ ಪ್ರಮಾಣ ಮತ್ತು ಸಕ್ಕರೆಯ ಪ್ರಮಾಣಗಳನ್ನು ಗ್ರಾಹಕರ ಆದ್ಯತೆಗಳ ಪ್ರಕಾರ ಬದಲಾಯಿಸಬಹುದಾಗಿದೆ.ಫಿಲ್ಟರ್ ಕಾಫಿಯನ್ನು ಮೇಲ್ಬಾಗದಲ್ಲಿ ನೊರೆ ಬರೆಸಲು ಲೋಟ ಮತ್ತು ಪಾತ್ರದ ನಡುವೆ ತ್ವರಿತ ಅನೇಕ ಬಾರಿ ವರ್ಗಾಯಿಸಲಾಗುತ್ತದೆ. ಕಡಿಮೆ ಹಾಲು ಇರುವ ಕಾಫಿಯನ್ನು ಸ್ಟಾçಂಗ್ ಎಂದು ಕರೆಯಲಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು ಸಕ್ಕರೆ ಹಾಕದ ಅಥವಾ ಅತಿ ಕಡಿಮೆ ಸಕ್ಕರೆ ಹಾಕಿದ ಫಿಲ್ಟರ್ ಕಾಫಿಯನ್ನು ಕೇಳಿ ಪಡೆಯುತ್ತಾರೆ.
ಕರ್ನಾಟಕದ ಬಹುತೇಕ ಎಲ್ಲಾ ಉಪಹಾರ ಗೃಹಗಳು,ದರ್ಶಿನಿಗಳು ಮತ್ತು ಹೋಟೆಲ್‌ಗಳು ತಮ್ಮ ಅತಿಥಿಗಳಿಗೆ ಫಿಲ್ಟರ್ ಕಾಫಿಯನ್ನು ನೀಡುತ್ತವೆ. "ಬ್ರಾಹ್ಮಣರ ಕಾಫಿ ಬಾರ್", ಹಟ್ಟಿ ಕಾಫಿ ಮುಂತಾದ ಕೆಲವು ಮಳಿಗೆಗಳು ಕಾಫಿ ಪ್ರಿಯರಿಗೆ ಪರಿಚಿತವಾಗಿವೆ. ಕನ್ನಡಿಗರು ಮನೆಗೆ ಬಂದ ಅತಿಥಿಗಳಿಗೆ ಸತ್ಕಾರದ ಭಾಗವಾಗಿ ತಪ್ಪದೇ ಫಿಲ್ಟರ್ ಕಾಫಿ ಬೇಕೇ ಎಂದು ಕೇಳುತ್ತಾರೆ.