ಶಿರಾ :
ಪವಿತ್ರ ರಂಜಾನ್ ಮಾಸ ಬಂತೆಂದೆರೆ ಸಾಕು ಮುಸ್ಲಿಂ ಭಾಂದವರಿಗೆ ಸಂಭ್ರಮವೋ ಸಂಭ್ರಮ, ಸಂಭ್ರಮ ಸಡಗರದ ಜೊತೆಗೆ ಮುಸ್ಲಿಂ ಭಾಂದವರು ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾ ಇದ್ದು. ಇದರ ಪ್ರಯುಕ್ತ ಅಲ್ಲಲ್ಲಿ ಇಫ್ತಿಯಾರ್ ಕೂಟವನ್ನು ಆಯೋಜನೆ ಮಾಡಲಾಗ್ತಿದ್ದು, ಶಿರಾ ನಗರದಲ್ಲಿಯೂ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ ಜಯಚಂದ್ರ ಅವರು ಮುಸ್ಲಿಂ ಭಾಂದವರಿಗಾಗಿ ಇಫ್ತಿಯಾರ್ ಕೂಟವನ್ನು ಆಯೋಜಿಸಿದ್ದರು.
ನಗರದ ಜಾಮಿಯಾ ಶಾದಿ ಮಹಲ್ನಲ್ಲಿ ಇಫ್ತಿಯಾರ್ ಕೂಟವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟಿ.ಬಿ ಜಯಚಂದ್ರ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ವತಿಯಿಂದ ಇಫ್ತಿಯಾರ್ ಕೂಟ ಏರ್ಪಡಿಸಲಾಗಿದೆ. ನಮಗೆ ಯುಗಾದಿ ಹಬ್ಬ ಹೇಗೆ ಪ್ರಮುಖವೋ ಹಾಗೆಯೇ ಮುಸ್ಲಿಮರಿಗೂ ಸಹ ರಂಜಾನ್ ಹಬ್ಬ ಪ್ರಮುಖವಾಗಿದೆ. ಬಡವರಿಗೆ ದಾನ,ಧರ್ಮ ಮಾಡಿ ತಮ್ಮ ಕೈಲಾದಷ್ಟು ಸಹಾಯ ಮಾಡೋ ಮೂಲಕ ಹಬ್ಬ ಆಚರಣೆ ಮಾಡ್ತಾರೆ, ಇದು ಕೋಮು ಸೌಹರ್ದತೆಯ ಸಂಕೇತವಾಗಿದ್ದು, ಎಲ್ಲರೂ ಸೇರಿ ಹಬ್ಬ ಆಚರಿಸಿದರೆ, ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ಸದಾಕಾಲ ನೆಲೆಸುತ್ತೇ ಎಂದರು.
ಇನ್ನು ಜಾಮೀಯಾ ಶಾದಿ ಮಹಲ್ ನಲ್ಲಿರೋ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ಖಾನ್. ತಹಶೀಲ್ದಾರ್ ಸಚ್ಚಿದಾನಂದ ಕೂಚನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಅರ್ ಮಂಜುನಾಥ್, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಮುಸ್ಲಿಂ ಭಾಂದವರು ಭಾಗಿಯಾಗಿದ್ದರು. ಸಂಜೆ ಉಪವಾಸ ಬಿಡುವ ವೇಳೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದರು, ಇಫ್ತಿಯಾರ್ ಕೂಟದ ಅಂಗವಾಗಿ ನಾನಾ ಬಗೆಯ ಹಣ್ಣುಗಳು, ನಾನಾ ಬಗೆಯ ಪದಾರ್ಥಗಳನ್ನು ತಯಾರಿಸಿದ್ದು, ಔತಣಕೂಟದಲ್ಲಿ ಒಟ್ಟಿಗೆ ಭೋಜನ ಸವಿದು ಸಂಭ್ರಮಿಸಿದರು.