ದಕ್ಷಿಣ ಕನ್ನಡ : ಸೀಮಂತದ ಸಂಭ್ರಮದಿಂದ ಕುಟುಂಬ, ಕ್ಷಣಾರ್ಧದಲ್ಲಿ ಶೋಕಸಾಗರಕ್ಕೆ ಮುಳುಗಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಟ್ವಾಳ ತಾಲೂಕಿನ ವಿಟ್ಲ ಪಟ್ಟಣದ ಸಮೀಪದ ಕನ್ಯಾನ ಮಿತ್ತನಡ್ಕದಲ್ಲಿ ನಡೆದಿದೆ. ಪಿಕಪ್ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸತೀಶ್ ಎಂಬವರು, ತಮ್ಮ ಪತ್ನಿಯ ಸೀಮಂತದ ದಿನವೇ ಅನಾಹುತವಾಗಿ ಜೀವನವಿಗೆ ವಿದಾಯ ಹೇಳಿದ್ದಾರೆ.
ಸತೇಶ್ ಅವರು ಸೀಮಂತ ಸಂಭ್ರಮದ ವಾತಾವರಣದ ನಡುವೆ ತೀರ್ವವಾಗಿ ಅಸ್ವಸ್ಥರಾಗಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬದವರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ದುರದೃಷ್ಟವಶಾತ್, ಮಂಗಳೂರಿಗೆ ತಲುಪುವ ಮೊದಲು ಮಾರ್ಗಮಧ್ಯದಲ್ಲಿಯೇ ಸತೀಶ್ ಅವರು ಕೊನೆಯುಸಿರೆಳೆದಿದ್ದಾರೆ.
ಸತೀಶ್ ಅವರ ಹಠಾತ್ ನಿಧನಕ್ಕೆ ನಿಖರವಾದ ವೈದ್ಯಕೀಯ ಕಾರಣ ಇನ್ನೂ ಬಹಿರಂಗವಾಗಿಲ್ಲ. ಹೃದಯಾಘಾತ ಎಂಬ ಅನುಮಾನವಿರುವಿದ್ದರೂ, ಅಧಿಕೃತವಾಗಿ ಯಾವುದೇ ದೃಢೀಕರಣ ಬಂದಿಲ್ಲ. ಇನ್ನು ಈ ದುರ್ಘಟನೆಯ ಸುದ್ದಿಯು ಇಡೀ ಗ್ರಾಮದಲ್ಲಿ ಆಘಾತ ಉಂಟುಮಾಡಿದೆ.