HEALTH TIPS : ಅಲೋವೆರಾ ಜ್ಯೂಸ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳು

HEALTH TIPS : ಅಲೋವೆರಾ ಜ್ಯೂಸ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ಸೋಡಿಯಂನಂತಹ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನೂ ಸೇವಿಸಬಹುದು. ಚರ್ಮಕ್ಕೆ  ಸಂಬಂಧಿಸಿದ ಸಮಸ್ಯೆಗಳು,  ಮಲಬದ್ಧತೆ ಮತ್ತು ಕೀಲು ನೋವು ಇತ್ಯಾದಿಗಳಿಂದ ನಿಮಗೆ ಪರಿಹಾರವನ್ನು ನೀಡಲು ಇದು ಕೆಲಸ ಮಾಡುತ್ತದೆ. 

* ಜೀರ್ಣಕ್ರಿಯೆ ಸುಧಾರಣೆ:
ಅಲೋವೆರಾ ಜ್ಯೂಸ್ ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ, ಗ್ಯಾಸು, ಕಬ್ಬಿಣದ ಕೊರತೆ, ಮುಂತಾದ ಜೀರ್ಣಕ್ರಿಯೆ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

*  ದೇಹದ ಡಿಟಾಕ್ಸ್
ಅಲೋವೆರಾ ಜ್ಯೂಸ್ ದೇಹದಲ್ಲಿ ಜಮೆಯಾಗಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಲಿವರ್ ಮತ್ತು ಕಿಡ್ನಿಗೆ ಶುದ್ಧೀಕರಣದಲ್ಲಿ ಸಹಕಾರಿ.

* ಚರ್ಮದ ಆರೋಗ್ಯ
ಇದು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ. ಪಿಂಪಲ್ಸ್, ಅಲರ್ಜಿ, ಡ್ರೈ ಸ್ಕಿನ್, ಅಥವಾ ಅ್ಯಾಕ್ನೆ ಸಮಸ್ಯೆಗೆ ಉಪಯೋಗಿ.

* ತೂಕ ಇಳಿಕೆ
ನಿಯಮಿತವಾಗಿ ಅಲೋವೆರಾ ಜ್ಯೂಸ್ ಸೇವನೆ, ದೇಹದ ಮೆಟಬಾಲಿಸಂವನ್ನು ಗಟ್ಟಿ ಮಾಡುತ್ತದೆ, ಇದು ತೂಕ ಇಳಿಸಲು ಸಹಕಾರಿ.

* ಉರಿಯೂತ ನಿವಾರಣೆ
ಅಲೋವೆರಾ ದೇಹದ ಒಳಗಿನ ಹಾಗೂ ಹೊರಗಿನ ಉರಿಯೂತ  ಕಡಿಮೆ ಮಾಡುತ್ತದೆ.

*  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅಲೋವೆರಾ ವಿಟಮಿನ್‌ಗಳು, ಮಿನರಲ್‌ಗಳು ಹಾಗೂ ಆಂಟಿ-ಆಕ್ಸಿಡೆಂಟ್ಸ್ ಇದ್ದು, ಇವು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.

* ಶುಗರ್ ಲೆವೆಲ್ ನಿಯಂತ್ರಣ
ಅಲೋವೆರಾ ಜ್ಯೂಸ್, ಟೈಪ್ 2 ಡಯಬೆಟಿಸ್ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

 

Author:

...
Keerthana J

Copy Editor

prajashakthi tv

share
No Reviews