ರಾಯಚೂರು : ಭಕ್ತರ ಕಲ್ಪವೃಕ್ಷ ಎಂದೇ ಹೆಸರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ತೋರಿದಂತಾಗಿದೆ. ಕೇವಲ 20 ದಿನಗಳ ಅವಧಿಯಲ್ಲಿ ರಾಯರ ಮಠಕ್ಕೆ ಭಕ್ತರಿಂದ ₹3 ಕೋಟಿ 79 ಲಕ್ಷ 10 ಸಾವಿರ 455 ರೂಪಾಯಿಗಳಾಗಿವೆ. ಜೊತೆಗೆ 74 ಗ್ರಾಂ ಚಿನ್ನ ಮತ್ತು 1,830 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.
ದೇಶ-ವಿದೇಶಗಳಿಂದ ನೂರಾರು ಭಕ್ತರು ಪ್ರತಿದಿನವೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಾರೆ. ಇದೇ ಭಕ್ತಿಯ ಪ್ರತಿಫಲವಾಗಿ ಮಠದ ಹುಂಡಿ ಎಣಿಕೆಯಲ್ಲಿ ಈ ಅವಿಶ್ವಾಸನೀಯ ಮೊತ್ತ ಬೆಳಕಿಗೆ ಬಂದಿದೆ. ಇನ್ನು ಹುಂಡಿ ಎಣಿಕೆ ಕಾರ್ಯದಲ್ಲಿ ನೂರಾರು ಸೇವಾದಾರರು ಪಾಲ್ಗೊಂಡು, ಶಾಸ್ತ್ರೀಯ ರೀತಿಯಲ್ಲಿ ಹಣ ಹಾಗೂ ಚಿನ್ನಾಭರಣಗಳನ್ನು ವರ್ಗಾವಣೆ ಮಾಡುವ ಕಾರ್ಯ ಮಾಡಿದ್ದಾರೆ. ಶ್ರೀಮಠದ ಆಡಳಿತ ಮಂಡಳಿ ಈ ಕಾರ್ಯವನ್ನು ಶಿಸ್ತಿನಿಂದ ಹಾಗೂ ನಿಗದಿತ ನಿಯಮಾನುಸಾರ ನಡೆಸಿದೆ.
ಇನ್ನು ಪ್ರತಿದಿನ ಸಾವಿರಾರು ಭಕ್ತರು ಗುರುರಾಯರ ದರ್ಶನ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಮಠದ ಮಹತ್ವ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಅವಧಿಯ ದರ್ಶನಾರ್ಥಿಗಳ ಸಂಖ್ಯೆಯೂ ಭಾರಿ ಏರಿಕೆಯಾಗಿದೆ.