CRICKET : 69 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಕ್ರಿಕೆಟ್‌ : ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ ಅವರ ಜೀವನದಲ್ಲಿ ಹೊಸ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೇಮದ ಬಗ್ಗೆ ಬಿಚ್ಚಿಟ್ಟಿರುವ ಧವನ್, ಐರ್ಲೆಂಡ್ ಮೂಲದ ಸೋಫಿ ಶೈನ್ ಜೊತೆ ಸಂಬಂಧದಲ್ಲಿ ಇದ್ದಾರೆ ಎಂಬುದು ಈಗ ದೃಢವಾಗಿದೆ.

2025 ರ ಆರಂಭದಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ ಈ ಜೋಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು, ಬಳಿಕ ಹಲವಾರು ವೇಳೆಗೂ ಒಟ್ಟಿಗೆ ಕಂಡುಬಂದಿದ್ದರು. ಆದರೆ ಮೇ ತಿಂಗಳಲ್ಲಿ ಈ ಜೋಡಿ ತಮ್ಮ ಡೇಟಿಂಗ್ ಸಂಬಂಧವನ್ನು ಇನ್‌ಸ್ಟಾಗ್ರಾಂ ಮೂಲಕ ಅಧಿಕೃತಗೊಳಿಸಿದ ನಂತರ, ಇಬ್ಬರೂ ಇದೀಗ ಹೊಸ ಮನೆ ಖರೀದಿಸುವ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬ ನಿರೀಕ್ಷೆ ಮೂಡಿದೆ.

ಇನ್ನು ಧವನ್, ಗುರುಗ್ರಾಮ್ನ ಡಿಎಲ್ಎಫ್ ಗಾಲ್ಫ್ ಕೋರ್ಸ್ ರಸ್ತೆಯ ‘ದಿ ಡೇಲಿಯಾಸ್’ ಎಂಬ ಸೂಪರ್ ಐಷಾರಾಮಿ ವಸತಿ ಯೋಜನೆಯಲ್ಲಿ 6040 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಮೌಲ್ಯ ಎಷ್ಟೆಂದರೆ ಸುಮಾರು ₹65.61 ಕೋಟಿ ರೂ.ಇದಲ್ಲದೆ ₹3.28 ಕೋಟಿ ಸ್ಟಾಂಪ್ ಡ್ಯೂಟಿ ಸೇರಿ, ಒಟ್ಟು ₹69 ಕೋಟಿ ರೂ. ಪಾವತಿಸಿದ್ದಾರೆ.

ಇನ್ನು ಸೋಫಿ ಶೈನ್, ಐರ್ಲೆಂಡ್‌ನ ಕ್ಯಾಸಲ್ರಾಯ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಇದೀಗ ಅವರು ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಫಿ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧವನ್ ಜೊತೆಗಿನ ಚಿತ್ರ ಹಂಚಿಕೊಂಡು “My Love” ಎಂದು ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದ್ದರು. ಇದರಿಂದಾಗಿ ಧವನ್ ಅವರ ಪ್ರೇಮ ಜೀವನದ ಹೊಸ ಅಧ್ಯಾಯ ಬಹಿರಂಗವಾಗಿತ್ತು.

ಶಿಖರ್‌ ಧವನ್ ತಮ್ಮ ವೃತ್ತಿ ಜೀವನದಂತೆಯೇ ವೈಯಕ್ತಿಕ ಜೀವನದಲ್ಲೂ ಹೊಸ ಎತ್ತರಗಳನ್ನು ತಲುಪುತ್ತಿದ್ದಾರೆ. ಈ ಪ್ರೇಮ ಜೋಡಿಯ ಮುಂದಿನ ಹಂತಗಳನ್ನು ನೋಡಲು ಅಭಿಮಾನಿಗಳು ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews