ಹುಳಿಯಾರು:
ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪಿಕ್‌ಪಾಕೆಟ್ ಮಾಡ್ತಿದ್ದ ಐನಾತಿ ಕಳ್ಳಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಲಾಕ್ ಮಾಡಿದ್ದಾರೆ. ಬಂಧಿತ ಮಹಿಳೆ ಕೊರಟಗೆರೆ ಪಟ್ಟಣದ ಬೋವಿ ಕಾಲೋನಿಯ ನಿವಾಸಿ ಅಲುವೇಲಮ್ಮ ಎಂದು ಗುರುತಿಸಲಾಗಿದೆ. ಈಕೆ ಪ್ರಯಾಣಿಕರ ಸೋಗಿನಲ್ಲಿ ಬಂದು ಬ್ಯಾಗ್‌ನಲ್ಲಿದ್ದ ಪರ್ಸ್‌ಗಳನ್ನು ಎಗರಿಸುತ್ತಿದ್ದಳು ಎನ್ನಲಾಗಿದೆ.
ಜನವರಿ 9 ರಂದು ತಿಪಟೂರು ತಾಲೂಕಿನ ಗೌಡನಕಟ್ಟೆ ನಿವಾಸಿ ರಾಜೇಶ್ವರಿ ಹೊಸದುರ್ಗಕ್ಕೆ ಹೋಗಲು ತಿಪಟೂರಿನಿಂದ ಹುಳಿಯಾರಿಗೆ ಬಂದು, ಹುಳಿಯಾರ್‌ನಿಂದ ಹೊಸದುರ್ಗಕ್ಕೆ ಹೋಗಲು ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಕಾಯ್ತಾ ಇದ್ದರು. ಬಸ್‌ಗೆ ಹತ್ತುವ ವೇಳೆ ಅವರ ಬ್ಯಾಗ್‌ನಲ್ಲಿದ್ದ ಪರ್ಸ್ ಅನ್ನು ಯಾರೋ ಕಳ್ಳತನ ಮಾಡಿದ್ದರು. ಪರ್ಸ್ ನಲ್ಲು ಚಿನ್ನದ ಒಡವೆ ಇದ್ದು ರಾಜೇಶ್ವರಿ ಕಂಗಾಲಾಗಿದ್ದರು. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ವಿಶೇಷ ತಂಡ ರಚನೆ ಮಾಡಿದ್ದರು. ಫೆಬ್ರವರಿ 27ರಂದು ಆರೋಪಿ ಅಲುವೇಲಮ್ಮನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಐನಾತಿ ಕಳ್ಳಿಯಿಂದ 134 ಗ್ರಾಂ ಚಿನ್ನದ ಆಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಒಡವೆ ಕಳೆದುಕೊಂಡ ರಾಜೇಶ್ವರಿಗೆ ತಮ್ಮ ಒಡವೆಗಳನ್ನು ಹಸ್ತಾಂತರ ಮಾಡಲಾಗಿದೆ. ಇತ್ತ ಈ ಐನಾತಿ ಲೇಡಿ ಇನ್ನು ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.