KITCHEN: ಡಾಬಾ ಸ್ಟೈಲ್ ಪಾಲಕ್ ಪನ್ನೀರ್ ಮಾಡುವ ವಿಧಾನ

ಪಾಲಕ್‌ ಪನ್ನೀರ್‌
ಪಾಲಕ್‌ ಪನ್ನೀರ್‌
ಆರೋಗ್ಯ-ಜೀವನ ಶೈಲಿ

ಪಾಲಕ್ ಪನ್ನೀರ್ ರೆಸಿಪಿ 

ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು – 1 ಕಪ್
ಪನೀರ್ ಕ್ಯೂಬ್ಸ್ – 100 ಗ್ರಾಂ
ಪಲಾವ್ ಎಲೆ -2
ಜೀರಿಗೆ – ಅರ್ಧ ಚಮಚ
ಚೆಕ್ಕೆ – ಸ್ವಲ್ಪ
ಏಲಕ್ಕಿ – 1
ಬೆಣ್ಣೆ – 2 ಚಮಚ
ಕಸೂರಿ ಮೇತಿ – 2 ಚಮಚ
ಹಸಿರು ಮೆಣಸಿನ ಕಾಯಿ – 3
ಬೆಳ್ಳುಳ್ಳಿ – 5 ಎಸಳು
ಶುಂಠಿ – ಅರ್ಧ ಇಂಚು
ಗರಂ ಮಸಾಲ – ಅರ್ಧ ಚಮಚ
ಅಚ್ಚ ಖಾರದ ಪುಡಿ – ಅರ್ಧ ಚಮಚ
ಅರಶಿಣ – ಕಾಲು ಚಮಚ
ಫ್ರೆಶ್ ಕ್ರೀಮ್ – 2 ಚಮಚ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಕುದಿಯಲು ಆರಂಭವಾದ ಬಳಿಕ ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಅದನ್ನು ಬಿಸಿನೀರಿನಿಂದ ತೆಗೆದು ತಣ್ಣಿರಿಗೆ ಹಾಕಿಕೊಳ್ಳಿ. ಬಳಿಕ ಪಾಲಕ್ ಸೊಪ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು, ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿಕೊಳ್ಳಿ. ಬಳಿಕ ಅರ್ಧ ಲೋಟ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.ನಂತರ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ 2 ಚಮಚ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ. ಬಿಸಿಯಾದ ಬಳಿಕ ಅದಕ್ಕೆ ಪನೀರ್ ಅನ್ನು ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಪನೀರ್ ಅನ್ನು ಒಂದು ಪ್ಲೇಟ್‌ನಲ್ಲಿ  ತೆಗೆದಿಡಿ. ಅದೇ ಪ್ಯಾನ್‌ಗೆ ಚೆಕ್ಕೆ, ಜೀರಿಗೆ, ಪಲಾವ್ ಎಲೆ, ಏಲಕ್ಕಿ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ.ಈರುಳ್ಳಿ ಗೋಲ್ಡನ್ ಬಣ್ಣ ಬಂದ ಬಳಿಕ ಅದಕ್ಕೆ ಹೆಚ್ಚಿದ ಟೊಮೊಟೊ ಹಾಕಿಕೊಂಡು ಚನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ರುಬ್ಬಿದ ಪಾಲಕ್ ಮಿಶ್ರಣವನ್ನು ಹಾಕಿಕೊಳ್ಳಿ. ಮಿಶ್ರಣ ಚನ್ನಾಗಿ ಕುದಿದ ಬಳಿಕ ಅದಕ್ಕೆ ಪನೀರ್ ಅನ್ನು ಸೇರಿಸಿಕೊಳ್ಳಿ. ಬಳಿಕ ಅದಕ್ಕೆ ಫ್ರೆಶ್ ಕ್ರೀಮ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ನಂತರ ಇದಕ್ಕೆ ಗರಂ ಮಸಾಲೆಯನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಕಸೂರಿ ಮೇತಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಮೀಡಿಯಮ್ ಫ್ಲೇಮ್‌ನಲ್ಲಿ ಕುದಿಸಿಕೊಂಡರೆ ಪಾಲಕ್‌ ಪನ್ನೀರ್‌ ರೆಡಿ.

Author:

...
Sub Editor

ManyaSoft Admin

share
No Reviews