KITCHEN: ರುಚಿಕರವಾದ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ

ಮಾವಿನಕಾಯಿ ಚಿತ್ರಾನ್ನ
ಮಾವಿನಕಾಯಿ ಚಿತ್ರಾನ್ನ
ಆರೋಗ್ಯ-ಜೀವನ ಶೈಲಿ

ಯುಗಾದಿ ಹಬ್ಬ ಬಂತೆಂದರೆ ಸಾಕು ಹಬ್ಬದ ಅಡುಗೆಯೇ ಬಹಳ ವಿಶೇಷವಾಗಿರುತ್ತದೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬಗಳನ್ನು ಅದ್ಧೂರಿತನವಿಲ್ಲದೇ ಹೋದರೂ ಸರಳವಾಗಿ ಸಿಹಿತಿಂಡಿಗಳನ್ನು ಯಾರಿಸಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ,ತರಹೇವಾರಿ ಅಡುಗೆಗಳನ್ನು ಮಾಡಿಕೊಂಡು ಕುಟುಂಬದ ಸದಸ್ಯರೆಲ್ಲರ ಜೊತೆಗೆ ಕುಳಿತು ಊಟ ಮಾಡುವ ಸಂಭ್ರಮವೇ ಬೇರೆ.ಸುಲಭವಾಗಿ ಮಾವಿನಕಾಯಿ ಚಿತ್ರಾನ್ನ  ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು

*ಮಾವಿನಕಾಯಿ – 1 (ತುರಿದುಕೊಂಡಿರುವುದು)
*ಎಣ್ಣೆ – 6 ಚಮಚ
*ಹಸಿಮೆಣಸಿನಕಾಯಿ - 5
*ಕಡಲೆಕಾಯಿ ಬೀಜ – 4 ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಕರಿಬೇವಿನ ಸೊಪ್ಪು – ಸ್ವಲ್ಪ

*ಸಾಸಿವೆ  - ಸ್ವಲ್ಪ
*ಅರಿಶಿನ ಪುಡಿ - ಸ್ವಲ್ಪ
*ಜೀರಿಗೆ - ಸ್ವಲ್ಪ
*ಕಡ್ಲೆಬೇಳೆ  - ಸ್ವಲ್ಪ
*ಉದ್ದಿನಬೇಳೆ – ಸ್ವಲ್ಪ

*ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಒಂದು ಬಾಣಲೆಗೆ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಹಾಕಿ ಬಳಿಕ ಅದಕ್ಕೆ ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆಯನ್ನೂ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ,ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಳ್ಳಿ.  ಉಪ್ಪು ಸೇರಿಸಿ ತುರಿದಿಟ್ಟ ಮಾವಿನಕಾಯಿಯನ್ನು ಹಾಕಿ 1ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ.ನಂತರ ಅರಿಶಿನ ಪುಡಿ ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡ ನಂತರ ಗ್ಯಾಸ್ ಆಫ್ ಮಾಡಿ. ಬಳಿಕಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಂತರ ಅನ್ನವನ್ನು  ಮಿಶ್ರಣಕ್ಕೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.

 

Author:

...
Sub Editor

ManyaSoft Admin

Ads in Post
share
No Reviews