HEALTH TIPS: ಒಂದೆಲಗ ಎಲೆಗಳ ಆರೋಗ್ಯ ಲಾಭಗಳು ನಿಮಗೆಷ್ಟು ಗೊತ್ತು?

HEALTH TIPS: 

ಒಂದೆಲಗ ಎಲೆಗಳ ಆರೋಗ್ಯ ಲಾಭಗಳು :

* ಮೆದುಳಿನ ಆರೋಗ್ಯಕ್ಕೆ ಉತ್ತಮ:

ಒಂದೆಲಗಾ ಎಲೆಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಸ್ಮರಣಶಕ್ತಿಯನ್ನು ಉತ್ತಮ ಗೊಳಿಸುತ್ತವೆ. ಮಕ್ಕಳಿಗೂ ಹಿರಿಯರಿಗೂ ಉಪಯುಕ್ತ.

*ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ:

ಧೈರ್ಯ, ಮನಸ್ಸಿನ ಸಮತೋಲನ ಮತ್ತು ನಿದ್ದೆಗೆ ಸಹಾಯಕ. ಔಷಧಿಯಾಗಿ ಆಯುರ್ವೇದದಲ್ಲಿ ಉಪಯೋಗವಾಗುತ್ತದೆ.

*ಚರ್ಮದ ಸಮಸ್ಯೆಗಳಿಗೆ ಉಪಯುಕ್ತ:

ಒಂದೆಲಗ ಮುಖದ ಮೊಡವೆಗಳಿಗೆ, ಮುಖದ ಉರಿಗೆ, ಗಾಯಗಳನ್ನು ಗುಣಪಡಿಸಲು ಸಹಾಯ. ಹಲವಾರು ಸ್ಕಿನ್ ಕ್ರೀಮ್‌ಗಳಲ್ಲಿ ಇದನ್ನು ಬಳಸುತ್ತಾರೆ.

* ಅಂಟು ರೋಗ ನಿರೋಧಕ ಶಕ್ತಿ:

ಒಂದೆಲಗ ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ವಾತ, ಪಿತ್ತ, ಕಫ ದೋಷಗಳ ಸಮತೋಲನಕ್ಕೆ ಸಹಕಾರಿಯಾಗಿದೆ.

*ಅಸ್ತಮಾ ಸಮಸ್ಯೆ ಇರುವವರಿಗೆ ಒಂದೆಲಗ ಎಲೆ ಉತ್ತಮ ಮದ್ದು. ಆಹಾರದಲ್ಲಿ ಒಂದೆಲಗ ಸೊಪ್ಪನ್ನು ಸೇವನೆ ಮಾಡುವುದು ಅಸ್ತಮಾಕೆಕ ಪರಿಹಾರ ನೀಡುತ್ತದೆ.

Author:

...
Keerthana J

Copy Editor

prajashakthi tv

share
No Reviews