ಬೆಂಗಳೂರು : ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್ ಸೀಜ್ | ಮ್ಯಾನೇಜರ್ ಬಂಧನ

ಬೆಂಗಳೂರು : ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೋರಮಂಗಲದಲ್ಲೊಂದು ವಿವಾದ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಜಿ.ಎಸ್ ಸೂಟ್ ಹೋಟೆಲ್ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.

ಕೋರಮಂಗಲದ ಜಿ.ಎಸ್ ಸೂಟ್ ಹೋಟೆಲ್ ನಲ್ಲಿ ಇಳಕೆಯ ಉದ್ದಕ್ಕೂ ಓಡುತ್ತಿದ್ದ ಡಿಜಿಟಲ್ ಎಲ್ಇಡಿ ಬೋರ್ಡ್‌ನಲ್ಲಿ ಅವಹೇಳನಕಾರಿ ಬರಹವನ್ನು ಪ್ರದರ್ಶಿಸಲಾಗಿತ್ತು. ಸ್ಥಳೀಯರು ಅದನ್ನು ಗಮನಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಹೋಟೆಲ್‌ನ ಈ ನಡೆಗೆ ಕನ್ನಡಿಗರು ಅಸಮಾಧಾನ ಹೊರಹಾಕಿದ್ದರು.‌

ಸ್ಥಳೀಯರ ದೂರುಗಳ ಹಿನ್ನೆಲೆಯಲ್ಲಿ ಮಡಿವಾಳ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್ಐ ರಮೇಶ್ ಹೂಗಾರ್ ಅವರ ನೇತೃತ್ವದಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಾಗಿದೆ. ಹೋಟೆಲ್ ಮ್ಯಾನೇಜರ್ ಸರ್ಫರಾಜ್ ಅವರನ್ನು ಪೊಲೀಸರು ಬಂಧಿಸಿದ್ದು, ಮಾಲೀಕ ಜಮ್ಶದ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇನ್ನು ಜಿ.ಎಸ್ ಸೂಟ್ ಹೋಟೆಲ್  ಮಾಲೀಕ ಜಮ್ಶದ್ ಪ್ರಸ್ತುತ ಕೇರಳದಲ್ಲಿರುವ ಮಾಹಿತಿ ಲಭಿಸಿದೆ. ಪೊಲೀಸರು ಅವರ ಪತ್ತೆಗೆ ಕ್ರಮ ಆರಂಭಿಸಿದ್ದಾರೆ. ಈ ನಡುವೆ ಹೋಟೆಲ್ ಗೆ ಬೀಗ ಹಾಕಲಾಗಿದೆ. ಘಟನೆಯ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Author:

...
Keerthana J

Copy Editor

prajashakthi tv

share
No Reviews