ಕೊಪ್ಪಳ : ಕೊಪ್ಪಳ ಜಿಲ್ಲೆಯ ಚಿಲಕಮುಖಿ ಗ್ರಾಮದ ಈ ಪ್ರಕರಣ ಅನಿಷ್ಟ ಪದ್ಧತಿ ಇನ್ನೂ ಜೀವಂತವಿರುವುದನ್ನು ಪುನಾರೂಢಗೊಳಿಸುತ್ತದೆ. ಹನುಮಂತ ಎಂಬುವವರು ಮಂಜುಳಾ ಎಂಬುವವರನ್ನು ತಮ್ಮ ಇಚ್ಛೆಯ ಪ್ರಕಾರ ಪ್ರೀತಿಸಿ ಮದುವೆಯಾಗಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆಯಾದ ನಂತರ ಇವರ ಕುಟುಂಬಕ್ಕೆ ಕಳೆದ ಎಂಟು ವರ್ಷಗಳಿಂದ ಸಂಪೂರ್ಣ ಬಹಿಷ್ಕಾರ ವಿಧಿಸಲಾಗಿದೆ.
ಇನ್ನು ಮಂಜುಳಾಗೆ ಬಾಲ್ಯದಲ್ಲಿ ಇನ್ನೊಬ್ಬನೊಂದಿಗೆ ಮದುವೆಯಾಗಿದ್ದರೂ, ಪ್ರೀತಿಗೆ ಮರುಮುಖವಾದಳು. ಹನುಮಂತಪ್ಪನ ಜೊತೆ ಪ್ರೀತಿಯಲ್ಲಿ ಮುಳುಗಿ, ವಿವಾಹವಾಗಿದ್ದಾಳೆ. ಆದರೆ ಈ ನಿರ್ಧಾರ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣವೇ ಬಹಿಷ್ಕಾರ ವಿಧಿಸಿದೆ. ಎಂಟು ವರ್ಷಗಳ ಕಾಲ ಈ ಜೋಡಿ ಯಲಬುರ್ಗಾದಲ್ಲಿ ವಾಸ ಮಾಡಿತು. ಆದರೆ ನಾಲ್ಕು ತಿಂಗಳ ಹಿಂದೆ, ತಮ್ಮ ನೆಲ, ತಮ್ಮ ಜನರು ಎಂಬ ಭಾವನೆಗೆ ಮೀರಿ ಊರಿಗೆ ವಾಪಸು ಬಂದರು. ಹೀಗಾಗಿಯೇ, ಮತ್ತೊಮ್ಮೆ ಸಮಾಜದಿಂದ ಬಹಿಷ್ಕಾರದ ಬಿಸಿ ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ ಹನುಮಂತಪ್ಪನ ತಂದೆ ಶಿವಾಜಪ್ಪ ಅವರ ಮನೆಯಲ್ಲಿ ಕಾರ್ಯಕ್ರಮವೊಂದು ಜರುಗಿತು. ಈ ಕಾರ್ಯಕ್ರಮಕ್ಕೆ ಪರ್ವತ ಮಲ್ಲಯ್ಯ ಸಮಾಜದ ಕೆಲವು ಸದಸ್ಯರಿಗೂ ಆಹ್ವಾನ ನೀಡಲಾಗಿತ್ತು. ಊಟಕ್ಕೆ ಹಾಜರಾಗಿದ್ದವರ ಪೈಕಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಪ್ಪ ಸೇರಿದಂತೆ 16ಕ್ಕೂ ಹೆಚ್ಚು ಕುಟುಂಬಗಳು ಈಗ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿವೆ.