ಹೊಸಪೇಟೆ:
ಶಾರ್ಟ್ ಸರ್ಕ್ಯೂಟ್ ನಿಂದ SBI ಬ್ಯಾಂಕ್ ನ ಎಟಿಎಂ ಗೆ ಬೆಂಕಿ ತಗುಲಿ ಸುಮಾರು 16 ಲಕ್ಷ ರೂಪಾಯಿ ನಗದು ಸುಟ್ಟು ಭಸ್ಮವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಶುಕ್ರವಾರ ನಡೆದಿದೆ.
ಹೊಸಪೇಟೆ ನಗರದ ಸರ್ಕಾರಿ ಕಾಲೇಜು ರಸ್ತೆಯ ಪಕ್ಕದ ಫರ್ವಾಜ್ ಪ್ಲಾಜಾದ ಬಳಿಯಿರುವ ಎಸ್ ಬಿಐ ಎಟಿಎಂ ನಲ್ಲಿ ಇಂದು ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ. ಇನ್ನು ಬೆಂಕಿ ತಗುಲಿದ ಪರಿಣಾಮ ಮಳಿಗೆ ಸಂಪೂರ್ಣ ಸುಟ್ಟು ಹೋಗಿದ್ದು, ಎಟಿಎಂ ನಲ್ಲಿದ್ದ ಅಂದಾಜು 16 ಲಕ್ಷ ರೂ ಹಣ ಸಹ ಬೆಂಕಿ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ, ಬೆಂಕಿಗಾಹುತಿಯಾದ ಮಳಿಗೆಯ ಮೌಲ್ಯ 40 ರಿಂದ 50 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನು ವಿಷಯ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಬಿಐ ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.