ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ರಕ್ಷಣೆಗೆ ಹೋಗಿ ಪ್ರಾಣಬಿಟ್ಟ ಕುದುರೆ ಸವಾರ

ಭಾರತದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಧಕ್ಕೆ ತಂದು ಕೆಲವರು ಖುಷಿ ಪಡ್ತಾರೆ. ಮುಸ್ಲಿಂ ಮತ್ತು ಹಿಂದೂಗಳು ಎಷ್ಟೇ ಅನ್ಯೂನ್ಯವಾಗಿದ್ರು ಅವ್ರಲ್ಲಿ ಹುಳಿ ಇಂಡೋ ಕೆಲ್ಸ ಮಾಡ್ತಾರೆ. ಆದ್ರೆ, ಇದೇ ನಮ್ಮ ಬಾಂಧವ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರವಾಸಿಗರ ರಕ್ಷಣೆಗೆಂದು ಹೋಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ.

ಕಾಶ್ಮೀರ ಕಣಿವೆಯಲ್ಲಿ ಏಪ್ರಿಲ್‌ 22 ರಂದು ಪ್ರವಾಸಿಗರನ್ನೇ ಟಾರ್ಗೇಟ್‌ ಮಾಡಿಕೊಂಡು ಉಗ್ರರು ದಾಳಿ ನಡೆಸಿದ್ರು. ಈ ದಾಳಿಯಲ್ಲಿ ಕರ್ನಾಟಕ ಮೂವರು ಸೇರಿ 28 ಮಂದಿ ಮೃತಪಟ್ಟಿದ್ರು. ಇನ್ನು ಇದೇ ವೇಳೆ  "ಮುಗ್ಧ ಜನರನ್ನು ನೀವು ಯಾಕೆ ಕೊಲ್ಲುತ್ತಿದ್ದಿರಿ". ಎಂದು ಉಗ್ರರನ್ನು ಪ್ರಶ್ನಿಸಿದ್ದ ಕುದುರೆ ಸವಾರನ ಮೇಲೆ ಗುಂಡಿನ ದಾಳಿ ನಡೆದಿದ್ರು. ಪ್ರವಾಸಿಗರ ರಕ್ಷಣೆಗೆಂದು ಹೋಗಿ ತನ್ನ ಪ್ರಾಣ ತೆತ್ತ ವ್ಯಕ್ತಿ ಬೇರೆ ಯಾರು ಅಲ್ಲ ಆತ ಮುಸ್ಲಿಂ.

ಹೀಗೆ ಪ್ರವಾಸಿಗರ ರಕ್ಷಣೆಗೆಂದು ಹೋದ ಯುವಕನೇ 20 ವರ್ಷದ ಸೈಯದ್ ಆದಿಲ್ ಹುಸೇನ್ ಷಾ. ಅನಂತ್‌ನಾಗ್‌ನ ಐಶ್ಮುಖಮ್‌ನ ಹಪತ್ನರ್ ಗ್ರಾಮದ ಗುಜ್ಜರ್ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯವ. ಈತನೇ ಅವನ ಕುಟುಂಬದ ಏಕೈಕ ಆಧಾರಸ್ತಂಭ. ಆದ್ರೆ ಪ್ರವಾಸಿಗರನ್ನು ಕಾಪಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

Author:

...
Keerthana J

Copy Editor

prajashakthi tv

share
No Reviews