HASSAN: ಹಾಸನದಲ್ಲಿ ಭೀಕರ ಅಪಘಾತ | ಪೊಲೀಸ್ ಕಾನ್ಸ್‌ಟೇಬಲ್‌ ದುರ್ಮರಣ

ಹಾಸನ:

ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ, ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹಾಸನ  ಹೊರವಲಯದ ಕೆಂಚನಹಳ್ಳಿ ಬಳಿ  ನಡೆದಿದೆ.  11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಪ್ರಕಾಶ್ ( 38), ಮೃತ ದುರ್ದೈವಿಯಾಗಿದ್ದಾರೆ.

ಪ್ರಕಾಶ್ ಅವರು ಹಾಸನ ನಗರದಿಂದ ಸರ್ಕಾರಿ ದ್ವಿಚಕ್ರ ವಾಹನದಲ್ಲಿ ಗಾಡೇನಹಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ, ಏಕಾಏಕಿ ಎದುರಿನಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇನ್ನು ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಈ ಘಟನೆ ಹಾಸನ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

 

Author:

...
Keerthana J

Copy Editor

prajashakthi tv

share
No Reviews