NELAMANGALA : ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ | ಸ್ಥಳದಲ್ಲೇ ಉಸಿರು ಚೆಲ್ಲಿದ ಇಬ್ಬರು ಡ್ಯಾನ್ಸರ್

KUNIGAL NEWS : ನೆಲಮಂಗಲ (Nelamangala) ನಗರದ ಕುಣಿಗಲ್ ಬೈಪಾಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವ ಡ್ಯಾನ್ಸರ್‌ಗಳು  ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಬೆಂಗಳೂರಿನ ಶ್ರೀರಾಂಪುರ ನಿವಾಸಿ ಪ್ರಜ್ವಲ್ (22) ಹಾಗೂ ಕುರುಬರಹಳ್ಳಿ ನಿವಾಸಿ ಸಹನಾ (21) ಎಂದು ಗುರುತಿಸಲಾಗಿದೆ.

ಪ್ರಜ್ವಲ್ ಹಾಗೂ ಸಹನಾ ತಮ್ಮ ಬೈಕ್‌ನಲ್ಲಿ ಕುಣಿಗಲ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಲಾರಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಪಘಾತವಾದ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಲಾರಿ ಚಾಲಕನನ್ನು ಲಾರಿಯೊಂದಿಗೆ ವಶಕ್ಕೆ ಪಡೆಯಲಾಗಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯುವಕ ಮತ್ತು ಯುವತಿಗೆ ಡ್ಯಾನ್ಸಿಂಗ್ ವೃತ್ತಿಯಲ್ಲಿ ಚಿರಪರಿಚಯವಿದ್ದು, ಕೆಲವು ವರ್ಷಗಳ ಹಿಂದೆ ನಡೆದಿದ್ದ ಇವೆಂಟ್‌ನಲ್ಲಿ ಇಬ್ಬರು ಪರಿಚಿತರಾಗಿದ್ದರು. ಈ ಸಂಬಂಧ ಇವತ್ತು ಇವೆಂಟ್‌ಗಾಗಿ ಹಣ ಪಡೆಯಲು ಕುಣಿಗಲ್ಗೆ ಹೋಗಿದ್ದ ಅವರು, ವಾಪಸಾಗುವ ಮಾರ್ಗಮಧ್ಯೆ ಈ ದುರಂತ ಸಂಭವಿಸಿದೆ.

 

Author:

...
Keerthana J

Copy Editor

prajashakthi tv

share
No Reviews