ಮಂಡ್ಯ : ಮಳೆ ಅಬ್ಬರ | KRS ಡ್ಯಾಂನಲ್ಲಿ ಮೂರೇ ದಿನಕ್ಕೆ 9 ಅಡಿ ನೀರು ಏರಿಕೆ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್ಎಸ್ ಡ್ಯಾಂ ಮತ್ತೆ ಜೀವ ಕಳೆಬಂದಿದೆ.

ಕೇವಲ ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂನಲ್ಲಿ 9 ಅಡಿ ನೀರಿನ ಏರಿಕೆ ಕಾಣಿಸಿಕೊಂಡಿದೆ. ಮೂರು ದಿನಗಳ ಹಿಂದೆ ನೀರಿನ ಮಟ್ಟ 89 ಅಡಿಗೆ ಇಳಿದಿದ್ದರೆ, ಇದೀಗ 98 ಅಡಿಗೆ ಏರಿಕೆಯಾಗಿದೆ. ನಾಳೆ ವೇಳೆಗೆ 100 ಅಡಿ ತಲುಪುವ ಸಾಧ್ಯತೆಗಳೂ ಇದ್ದು, ಕೃಷಿಕರು ಹಾಗೂ ಜನತೆಗೆ ಈ ಸುದ್ದಿ ಸಂತಸ ತಂದಿದೆ.

ಇದೀಗ ಡ್ಯಾಂಗೆ 22,788 ಕ್ಯೂಸೆಕ್ ನೀರು ಒಳಹರಿಯುತ್ತಿದೆ, ಮತ್ತು ಹೊರಹರಿವು 630 ಕ್ಯೂಸೆಕ್ ಆಗಿದೆ. ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೆಆರ್ಎಸ್ ಡ್ಯಾಂನ ಒಟ್ಟು ಸಾಮರ್ಥ್ಯ 49.452 ಟಿಎಂಸಿ, ಇದರಲ್ಲಿ ಈಗಾಗಲೇ 21.282 ಟಿಎಂಸಿ ನೀರು ಸಂಗ್ರಹವಾಗಿದೆ.  ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರೆದರೆ, ಕೆಆರ್ಎಸ್ ಡ್ಯಾಂ ಪೂರ್ಣ ಮಟ್ಟ ತಲುಪುವ ಸಾಧ್ಯತೆಗಳಿವೆ.

 

Author:

...
Keerthana J

Copy Editor

prajashakthi tv

share
No Reviews