Health Tips:
ಲವಂಗವು ಹಲವು ರೀತಿಯ ಔಷಧಿ ವಸ್ತುವಾಗಿ ನೋಡಬಹುದಾಗಿದೆ. ಲವಂಗವು ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಹೊಂದಿದೆ. ಲವಂಗ ಕೆಮ್ಮು, ನೋವು ನಿವಾರಕ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಶೀತ ಮತ್ತು ಕೆಮ್ಮಿಗೆ ಲವಂಗದ ಮನೆಮದ್ದು : ಶೀತ ಮತ್ತು ಕೆಮ್ಮಿಗೆ ಲವಂಗ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಔಷಧಿಯಾಗಿದೆ. ಲವಂಗವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಎರಡು ಅಥವಾ ಮೂರು ಲವಂಗವನ್ನು ತಿಂದರೆ ಉತ್ತಮ. ಇನ್ನು ದೀರ್ಘಕಾಲದ ಕೆಮ್ಮಿನ ಸಮಸ್ಯೆಗೆ ತುಪ್ಪದಲ್ಲಿ ಹುರಿದಂತಹ ಲವಂಗವನ್ನು ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
ಲವಂಗದ ನೀರು ಮತ್ತಷ್ಟು ಒಳ್ಳೆಯದು : ಲವಂಗದ ನೀರು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು. ಲವಂಗದ ನೀರು ಕುಡಿಯುದರಿಂದ ನಮ್ಮ ದೇಹದಲ್ಲಿ ಕಂಡು ಬರುವ ತ್ರಿದೋಷವನ್ನು ಸಹ ಸಮತೋಲನಗೊಳಿಸಬಹುದು. ವಾತ ಮತ್ತು ಪಿತ್ತಕ್ಕೆ ಲವಂಗ ಅತ್ಯುತ್ತಮವಾಗಿದೆ. ಲವಂಗದ ನೀರು ತೂಕ ಇಳಿಸಿಕೊಳ್ಳಲು ಸಹಾಯಕಾರಿಯಾಗಿದೆ. ಬಾಯಾರಿಕೆ ಮತ್ತು ಹೊಟ್ಟೆ ಹುರಿ ಅಂತಹ ಸಮಸ್ಯೆಗೆ ಲವಂಗದ ನೀರು ಉತ್ತಮ. ಇನ್ನು ಜೀರ್ಣಕ್ರಿಯೆ ಸಮಸ್ಯೆ ಇದ್ದರೂ ಕೂಡ ಲವಂಗದ ನೀರು ಪರಿಹಾರ ನೀಡುತ್ತದೆ.
ಲವಂಗದ ನೀರು ತಯಾರಿಸುವುದು : ರಾತ್ರಿ ಒಂದಿಷ್ಟು ಲವಂಗವನ್ನು ನೀರಿನಲ್ಲಿ ನೆನಸಬೇಕು. ಬಳಿಕ ಬೆಳಗ್ಗೆ ಲವಂಗದ ನೀರನ್ನು ಬಿಸಿ ಮಾಡಿ ಅಥವಾ ಹಾಗೆಯೇ ಸೇವಿಸಬಹುದು.