ಬಳ್ಳಾರಿ : ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ, ಮುಖ್ಯ ಪೇದೆ ಆರ್. ದಾದಾಸಾಹೇಬ್ (51) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ.
ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ನಿವಾಸಿಯಾಗಿದ್ದ ದಾದಾಸಾಹೇಬ್ ಅವರು ಕಳೆದ 26 ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯ ಪರಾಯಣತೆ, ಶಿಸ್ತು ಮತ್ತು ಜನಸಂಪರ್ಕದಲ್ಲಿ ಪರಿಣಿತರಾಗಿದ್ದ ಅವರು ಸಹೋದ್ಯೋಗಿಗಳಿಂದ ಅಪಾರವಾದ ಗೌರವ ಗಳಿಸಿದ್ದರು.
ದಾದಾಸಾಹೇಬ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನದಿಂದ ಪೊಲೀಸರು ಮತ್ತು ಸಾರ್ವಜನಿಕರಲ್ಲಿ ದುಃಖದ ಛಾಯೆ ಹರಡಿದೆ. ದಾದಾಸಾಬೇಬ್ ಅವರ ಸಾವಿಗೆ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.