ಗುಬ್ಬಿ:
ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕ ಎಸ್. ಅರ್ ಶ್ರೀನಿವಾಸ್ ಅವರು ನೂತನ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟಿಸಿದ್ರು. ಈ ವೇಳೆ ತುಮುಲ್ ನಿರ್ದೇಶಕಿ ಭಾರತಿದೇವಿ, ಮುಖಂಡರಾದ ಬಿಟ್ಟಗೊಂಡನಹಳ್ಳಿ ಕೃಷ್ಣ, ಬೆಲವತ್ತ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಹಗಲಿರುಳು ದುಡಿದು ನನ್ನೆಲ್ಲಾ ಚುನಾವಣೆಗಳನ್ನು ಬಹಳ ಸಲೀಸಾಗಿ ಮಾಡಿ ನನ್ನ ಗೆಲುವಿಗೆ ಸಹಕಾರಿಯಾದ ಹೆಗ್ಗಳಿಕೆ ನನ್ನ ಧರ್ಮಪತ್ನಿಗೆ ಸೇರುತ್ತೆ, ಅಂತದ್ರಲ್ಲಿ ಸಹಕಾರಿ ಕ್ಷೇತ್ರದಿಂದ ಬರುವ ಎಲ್ಲಾ ಸವಲತ್ತುಗಳನ್ನ ನಿಮ್ಮೆಲ್ಲರಿಗೆ ಕೊಡಿಸೋ ಕೆಲಸ ಖಂಡಿತ ಮಾಡ್ತಾರೆ, ಅಲ್ದೇ ಸಮಾಜಕ್ಕೆ ಏನಾದ್ರೂ ತನ್ನದೇ ಕೊಡುಗೆ ನೀಡಬೇಕೆಂಬ ಹಂಬಲವಿರುವ ಮಹಿಳೆ ನನ್ನ ಧರ್ಮಪತ್ನಿ ಭಾರತಿ ಎಂದು ತಿಳಿಸಿದ್ರು. ಇನ್ನು ಸಿ.ಎಸ್ ಪುರ ಹೋಬಳಿ ಮಟ್ಟದಲ್ಲಿ ಈಗಾಗಲೇ 7 ಹಾಲಿನ ಡೈರಿಗಳನ್ನು ತೆರೆಯಲಾಗಿದ್ದು, ಮತ್ತಷ್ಟು ಘಟಕಗಳನ್ನ ತೆರೆಯಲಿದ್ದು, ಹಾಲು ಉತ್ಪಾದನೆ ಮಾಡುವ ಮೂಲಕ ಆರ್ಥಿಕವಾಗಿ, ಸದೃಢವಾಗಿ ಜೀವನ ಮಾಡುವ ಕೆಲಸ ಹಿಂದಿನ ಮಹಿಳೆಯರು ಮಾಡಲಿದ್ದಾರೆ ಎಂದರು.
ಇನ್ನು ತುಮುಲ್ ನಿರ್ದೇಶಕಿ ಭಾರತಿದೇವಿ ಮಾತನಾಡಿ ರೈತನಿಗೆ ಇರುವ ಶಕ್ತಿ ಯಾರಿಗೂ ಇಲ್ಲ, ರೈತರು ನಿಮ್ಮ ಶಕ್ತಿ ಅರಿತು ಕೆಲ್ಸ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅಂದ್ರು, ಬದುಕಲು ನೂರೆಂಟು ದಾರಿಗಳಿದ್ದು ಅದ್ರಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ಕೆಲ್ಸ ಮಾಡ್ಬೇಕು, ಅಲ್ದೇ ಪೂರಕವಾಗಿ ಕುಟುಂಬದ ಸಹಕಾರ ಇದ್ರೆ ಮಹಿಳೆ ಹಿಮಾಲಯದಂತಹ ಶಿಖರ ಬೇಕಾದ್ರೂ ಹೇರಬಲ್ಲಳು, ಹೀಗಿರುವಾಗ ಮಹಿಳೆಯರು ಕುಗ್ಗದೆ ಯಶಸ್ಸಿನ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.