ಹಾಸನ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೋಬ್ಬ ರೈತ ಆತ್ಮಹತ್ಯೆ

ಹಾಸನ: 

ಹಾಸನ ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಅರಕಲಗೂಡು ತಾಲೂಕು ಕಳ್ಳಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

50 ವರ್ಷದ ಕೇಶವಯ್ಯ ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಕೇಶವಯ್ಯ ಅವರು ಎರಡು ಖಾಸಗಿ ಫೈನಾನ್ಸ್ ಗಳಿಂದ 5 ಲಕ್ಷ ರೂ ಹಾಗೂ 60 ಸಾವಿರ ರೂ ಸಾಲ ಪಡೆದಿದ್ದು, 5 ಲಕ್ಷ ರೂ ಪಾವತಿಸುವಂತೆ ಫೈನಾನ್ಸ್‌ ಸಿಬ್ಬಂದಿಗಳು ಕೇಶವಯ್ಯ ಅವರ ಮನೆಗೆ ನೋಟಿಸ್‌ ಅಂಟಿಸಿದ್ದರು, ಈ ಪ್ರಕರಣ ದಾಖಲಾಗಿ ನ್ಯಾಯಾಲಯ ಮೆಟ್ಟಿಲೇರಿತ್ತು, ಇದರಿಂದ ಮನೆಯನ್ನು ಹರಾಜು ಹಾಕುವಂತೆ ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿತ್ತು ಎಂದು ತಿಳಿದುಬಂದಿದೆ. ಇದರಿಂದ ತೀವ್ರ ಮನನೊಂದ್ದಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಈ ಘಟನೆ ಅರಕಲಗೂಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Author:

...
Editor

ManyaSoft Admin

Ads in Post
share
No Reviews