ಸಾಂದರ್ಭಿಕ ಚಿತ್ರಆರೋಗ್ಯ-ಜೀವನ ಶೈಲಿ
Hair Tips:
ಮೊಸರು ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ ಕೂದಲಿಗೂ ಒಳ್ಳೆಯದು. ಮೊಸರನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ಕೂದಲು ಮೃದುವಾಗುತ್ತದೆ. ಮೊಸರಿನಲ್ಲಿ ಇರುವ ಸತು, ಫೋಲೇಟ್ ಮತ್ತು ವಿಟಮಿನ್-ಬಿ6 ಕೂದಲನ್ನು ಹೆಚ್ಚಿಸಿ, ಕೂದಲನ್ನು ಬಲಪಡಿಸಿ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ . ಹೆಚ್ಚಿನ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿಗೆ ಹಾನಿಯೇ ಹೆಚ್ಚು. ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು, ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲು ಮೃದುವಾಗುವುದರ ಜೊತೆಗೆ ಕೂದಲಿಗೆ ಪೋಷಣೆ ಸಿಗುತ್ತದೆ. ಮೊಸರನ್ನು ಯಾವ ರೀತಿ ಬಳಸಬೇಕೆಂದರೆ ,
ಬಾಳೆಹಣ್ಣು ಮತ್ತು ಮೊಸರು :
ಬಾಳೆಹಣ್ಣು ಮತ್ತು ಮೊಸರು ಕೂದಲಿಗೆ ತುಂಬಾ ಆರೋಗ್ಯಕರ. 1 ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದರಲ್ಲಿ 1 ಸಣ್ಣ ಬೌಲ್ ಮೊಸರು ಮತ್ತು 2 ರಿಂದ 3 ಹನಿ ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ ಹೇರ್ಪ್ಯಾಕ್ ತಯಾರಿಸಿ. ಆ ಮಿಶ್ರಣವನ್ನು ಕೂದಲಿಗೆ ಹಚ್ಚಿ 5 ರಿಂದ 10 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಈ ರೀತಿ ಮೊಸರನ್ನು ಹಚ್ಚುವುದರಿಂದ ಕೂದಲು ಬಲಗೊಳ್ಳುತ್ತದೆ ಮತ್ತು ಮೃದುವಾಗುತ್ತದೆ.
ನಿಂಬೆ ರಸ ಮತ್ತು ಮೊಸರು :
ನಿಂಬೆ ರಸ ಮತ್ತು ಮೊಸರು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಕೂದಲಿಗೆ ಹಚ್ಚಲು, 1 ಬೌಲ್ ಮೊಸರಿಗೆ 2 ಚಮಚ ನಿಂಬೆ ರಸ ಮತ್ತು ಕೆಲವು ಹನಿ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ. ಮಿಶ್ರಣವನ್ನು ಕೂದಲಿಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲದ ನಂತರ ಕೂದಲನ್ನು ಶಾಂಪೂ ಮಾಡಿ. ಈ ರೀತಿ ಮೊಸರನ್ನು ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯೂ ನಿವಾರಣೆಯಾಗುತ್ತದೆ.
ಮೊಸರು ಮತ್ತು ಜೇನುತುಪ್ಪ :
ಮೊಸರು ಮತ್ತು ಜೇನುತುಪ್ಪವು ಔಷಧೀಯ ಗುಣಗಳಿಂದ ಕೂಡಿದೆ. 1 ಚಿಕ್ಕ ಬೌಲ್ ಮೊಸರನ್ನು ತೆಗೆದುಕೊಂಡು, ಅದರಲ್ಲಿ 1 ಚಮಚ ಜೇನುತುಪ್ಪ ಮತ್ತು 1 ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ, ಆ ಮಿಶ್ರಣವನ್ನು ಕೂದಲಿನ ಬೇರುಗಳಲ್ಲಿ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಇರಿಸಿ. ನಂತರ ತೊಳೆಯಿರಿ. ಈ ರೀತಿ ಮೊಸರನ್ನು ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲು ಮೃದುವಾಗುತ್ತದೆ.
ಮೊಸರು ಮತ್ತು ಮೊಟ್ಟೆ :
ಮೊಸರು ಮತ್ತು ಮೊಟ್ಟೆಯನ್ನು ಕೂದಲಿಗೆ ಹಚ್ಚಲು, ಹಸಿ ಮೊಟ್ಟೆಯನ್ನು ಒಡೆದು ಅದಕ್ಕೆ ಮೊಸರನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವ ಮೊದಲು ಚೆನ್ನಾಗಿ ಕೂದಲನ್ನು ಬಾಚಿ. ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 10 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಹೀಗೆ ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲು ಒಣಗುವ ಸಮಸ್ಯೆ ನಿವಾರಣೆಯಾಗುವುದಲ್ಲದೆ ಕೂದಲು ಕೂಡ ಬೇಗ ಬೆಳೆಯುತ್ತದೆ.