SIRA: ಪಟ್ಟನಾಯಕನಹಳ್ಳಿಯಲ್ಲಿ ಗುರುಗುಂಡ ಬ್ರಹ್ಮೇಶ್ವರ ಜಾತ್ರಾಮಹೋತ್ಸವ

GURUGUNDA BRAMHEMSHARA MATADA SWAMIJI
GURUGUNDA BRAMHEMSHARA MATADA SWAMIJI
ತುಮಕೂರು

ಈ ಜಾತ್ರೆಯ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯುತ್ತಿದ್ದು, ನಿನ್ನೆ ಅದ್ದೂರಿ ಕೃಷಿಮೇಳ ಹಾಗೂ  ರೈತ ಸಮಾವೇಶ ನಡೆಯಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ರು.

ಈ ವೇಳೆ ಮಾತನಾಡಿದ ಆರ್‌.ಅಶೋಕ್‌ ರೈತರಿಗೆ ಹಲವು ಕಿವಿಮಾತುಗಳನ್ನ ಹೇಳಿದ್ರು. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಒಳ್ಳೆಯದು. ಆದರೆ ರೈತರನ್ನ ನೈಸರ್ಗಿಕ ಪದ್ಧತಿಯಿಂದ ಹೆಚ್ಚು ದೂರ ಕರೆದುಕೊಂಡು ಹೋಗಬಾರದು. ಹಿಂದೆ ರೈತರ ಮನೆಯಲ್ಲಿ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬನ್ನು ಕೃಷಿಗೆ ಪೂರಕವಾಗಿ ಅವಲಂಬಿಸಿದ್ದರು. ಆದರೆ ಇದೀಗ ರೈತರು ಎಲ್ಲವನ್ನೂ ಖರೀದಿಸುವಂತಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಸರ್ಕಾರ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನಕೊಡಬೇಕು ಎಂದರು.

ಬಳಿಕ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ದೊರೆತು ರೈತರಿಗೆ ಲಾಭದಾಯಕವಾದರೆ ಮಾತ್ರ ಕೃಷಿ ಕ್ಷೇತ್ರದತ್ತ ಯುವಜನತೆ ಮುಖ ಮಾಡಲು ಸಾಧ್ಯ. ರೈತರ ಬದುಕು ಹಸನು ಮಾಡಲು ಸರ್ಕಾರಗಳು ರೂಪಿಸಿದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸಬೇಕು. ವೈಜ್ಞಾನಿಕ ಕೃಷಿ ಅವಿಷ್ಕಾರಗಳ ಬಗ್ಗೆ ವಸ್ತು ಪ್ರದರ್ಶನದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಕೃಷಿಮೇಳ ಹಾಗೂ ರೈತರ ಸಮಾವೇಶದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಸುರೇಶ್, ಕೃಷಿಕ ಸಮಾಜ ಅಧ್ಯಕ್ಷ ಎನ್.ಸಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ್, ನೇಗಿಲಯೋಗಿ ಸೇವಾ ಟ್ರಸ್ಟ್‌ನ ಮುನಿರತ್ನಪ್ಪ,  ಕೃಷಿ ವಿಜ್ಞಾನಿ ಶಂಕರ್ ಸೇರಿದಂತೆ ಹಲವು ಮುಖಂಡರು, ಸಾವಿರಾರು ಶ್ರೀ ಮಠದ ಭಕ್ತರು ಹಾಜರಾಗಿದ್ರು.

Author:

...
Editor

ManyaSoft Admin

Ads in Post
share
No Reviews