Gulur : ಪ್ರಜಾಶಕ್ತಿ ಟಿವಿ ರಿಯಾಲಿಟಿ ಚೆಕ್ | ಗ್ರಾ.ಪಂ ಅಧಿಕಾರಿಗಳ ಕಳ್ಳಾಟ ಬಯಲು

GULUR : ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಹೇಳೋರು ಇಲ್ಲ. ಕೇಳೋರು ಇಲ್ಲದಂತಾಗಿದೆ. ಇಷ್ಟ ಬಂದಾಗ ಕಚೇರಿಗೆ ಬರೋದು ಇಷ್ಟ ಬಂದಾಗ ಹೋಗ್ತಾರೆ ಇದ್ದಾರೆ. ಇದರಿಂದ ಗ್ರಾಮಸ್ಥರಿಗೆ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗೆ ಅಲೆದು ಅಲೆದು ಸಾಕಾಗುವಂತಾಗಿದೆ. ಹೌದು ತುಮಕೂರು ಗ್ರಾಮಾಂತರ ಕ್ಷೇತ್ರದ ಗುಳೂರು ಗ್ರಾಮ ಪಂಚಾಯ್ತಿಯಲ್ಲಿ ಮಟ ಮಟ ಮಧ್ಯಾಹ್ನವೇ ಆಫೀಸ್‌ ಖಾಲಿ ಖಾಲಿಯಾಗಿರೋದು ಪ್ರಜಾಶಕ್ತಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ.

ಗೂಳೂರು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಕೆಲಸದ ಸಮಯದಲ್ಲಿ ಅಧಿಕಾರಿಗಳು ಕಾಣಿಸಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ ಬೆನ್ನಲ್ಲೇ ಇಂದು ಪ್ರಜಾಶಕ್ತಿ ಟಿವಿ ರಿಯಾಲಿಟಿ ಚೆಕ್‌ಗೆ ಇಳಿಯಿತು. ಮಧ್ಯಾಹ್ನ 12:30 ಸುಮಾರಿಗೆ ಗೂಳೂರು ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಪ್ರಜಾಶಕ್ತಿ ಟೀಂ ಹೋಗಿತ್ತು. ಆದರೆ ಅಲ್ಲಿ ಮಾತನಾಡಿಸಲು ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಇರಲಿಲ್ಲ ಬದಲಾಗಿ ಕಂಡಿದ್ದು, ಖಾಲಿ ಖಾಲಿಯಾದ ಚೇರ್‌ಗಳು. ಅಧಿಕಾರಿಗಳು ಎಲ್ಲಿ ಅಂತಾ ಕೇಳಲು ಕೂಡ ಒಬ್ಬರು ಇಲ್ಲದಿರೋದು ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.

ಇನ್ನು ಇವತ್ತು ಮಾತ್ರನಾ ಅಥವಾ ದಿನ ನಿತ್ಯವೂ ಅಧಿಕಾರಿಗಳು ಕಚೇರಿಗೆ ಗೈರಾಗುತ್ತಾರಾ ಎಂಬ ಪ್ರಶ್ನೆ ಎದಿದ್ದು, ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಸಮುಯಕ್ಕೆ ಸರಿಯಾಗಿ ಕೆಲಸ ಆಗ್ತಾ ಇಲ್ಲ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಅದರಂತೆ ಪ್ರಜಾಶಕ್ತಿ ಟಿವಿ ರಿಯಾಲಿಟಿ ಚೆಕ್‌ನಲ್ಲೂ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೇ, ಆದರೆ ಇಲ್ಲಿನ ಅಧಿಕಾರಿಗಳು ಆಫೀಸ್‌ ಟೈಂ ನಲ್ಲಿ ಹೀಗೆ ಎದ್ದು ಹೋದರೆ. ಜನರ ಕೆಲಸ ಮಾಡಿಕೊಡುವವರು ಯಾರು..? ಟೈಂಗೆ ಸರಿಯಾಗಿ ಸಂಬಳ ಬೇಕು, ಆದರೆ ಕೆಲಸ ಮಾಡಲು ಮಾತ್ರ ಕಳ್ಳಾಟ. ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews