ಗುಬ್ಬಿ:
ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಜಾತ್ರಾ ಮಹೋತ್ಸವದ ಅಂತಿಮಘಟ್ಟದ ಭಾಗವಾಗಿ ಗುಬ್ಬಿ ಹೊರವಲಯ ಚನ್ನಶೆಟ್ಟಿಹಳ್ಳಿಯಲ್ಲಿರೋ ಗುಬ್ಬಿಯಪ್ಪನ ಗದ್ದುಗೆಗೆ ಗರಿ ಗರಿ ನೋಟುಗಳಿಂದ ಅಲಂಕಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಣೆ ಮಾಡಿತು.
ಗುಬ್ಬಿಯಪ್ಪನ ತೆಪ್ಪೋತ್ಸವ ಮೂಲಕ ಜಾತ್ರೆಗೆ ತೆರೆ ಎಳೆದರೂ , ಅಂತಿಮವಾಗಿ ಇಂದು ಹೊರ ಸಂಚಾರ ರೀತಿ ಸ್ವಾಮಿಯನ್ನು ಮೆರವಣಿಗೆ ಮೂಲಕ ಚನ್ನಶೆಟ್ಟಿಹಳ್ಳಿ ಗದ್ದುಗೆ ಮಠಕ್ಕೆ ತೆರಳಿ ಬೆಳಿಗ್ಗೆಯಿಂದ ರುದ್ರಾಭಿಷೇಕ ನಡೆಸಿದರು . ಮಧ್ಯಾಹ್ನದ ವೇಳೆಗೆ ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸಂಜೆ ನಂತರ ಗುಬ್ಬಿಯಪ್ಪ ಸ್ವಾಮಿಯನ್ನುಅದ್ದೂರಿಯಾಗಿ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಪಟ್ಟಣಕ್ಕೆ ಕರೆ ತರಲಾಗುವುದು. ಮಾರ್ಗದ ಮಧ್ಯೆ ಭಕ್ತರು ಪಾನಕ ಫಲಾಹಾರ ವಿತರಣೆ ಮಾಡಲಾಯ್ತು. ಎಂಜಿ ರಸ್ತೆಯ ಅಂಗಡಿ ಮಾಲೀಕರು ಒಗ್ಗೂಡಿ ದಾಸೋಹ ವ್ಯವಸ್ಥೆ ಮಾಡಿದರು . ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ದೇವಾಲಯಕ್ಕೆ ತಲುಪಿ ಇಡೀ ಜಾತ್ರೆಯು ಅಂತಿಮವಾಗಿ ಸಂಪನ್ನಗೊಂಡಿತು.