GOLD RATE :
ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದೆ. ಇಂದು ಬಂಗಾರದ ಭರ್ಜರಿ ಇಳಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಹಬ್ಬ, ಹರಿದಿನ, ಮದುವೆ, ಯಾವುದೇ ಶುಭ ಸಂದರ್ಭವಿದ್ದರೂ, ಚಿನ್ನದ ಖರೀದಿ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಚಿನ್ನದ ದರದ ಇಳಿಕೆಯು ಗ್ರಾಹಕರಿಗೆ ಸಂತಸದ ಸಂಗಾತಿಯಾಗಿದೆ.
ಚಿನ್ನ – ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಆಭರಣ. ದಿಲ್ಲಿಯಿಂದ ಬೆಂಗಳೂರುವರೆಗೆ ಈಗ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ದಿಲ್ಲಿಯಲ್ಲಿ 10 ಗ್ರಾಂ ಚಿನ್ನಕ್ಕೆ ರೂ.3,400 ರಷ್ಟು ಕುಸಿತವಾಗಿದ್ದು, ಬೆಂಗಳೂರಿನಲ್ಲಿ ಕೂಡಾ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,800 ರೂಪಾಯಿ ಇಳಿಕೆ ಕಂಡಿದ್ದು, 96,880 ರೂ ತಲುಪಿತು.22 ಕ್ಯಾರೆಟ್ಗೆ 1,650 ರೂ, ಇಳಿದು 88,800 ಆಯಿತು. ಇತ್ತ ಬೆಳ್ಳಿ ಬೆಲೆಯಲ್ಲೂ ಕೆ.ಜಿ.ಗೆ 1,100 ಕಡಿಮೆಯಾಗಿ 97,900 ರೂಪಾಯಿ ಆಗಿದೆ.
ಇನ್ನು ಕೆಲವೇ ದಿನಗಳ ಹಿಂದೆ ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ದರವು 10 ಗ್ರಾಂಗೆ ರೂ.1 ಲಕ್ಷದ ಗಡಿ ದಾಟಿತ್ತು. ಆದರೆ ಈಗ ಚಿನ್ನದ ದರ ಇಳಿಕೆಯು ಚಿನ್ನದ ಖರೀದಿದಾರರಿಗೆ ಸೂಕ್ತ ಸಮಯವನ್ನು ಸೂಚಿಸುತ್ತದೆ.