Gold Rate : ಲಕ್ಷದತ್ತ ಮುನ್ನುಗ್ಗುತ್ತಿದೆ ಬಂಗಾರದ ದರ..!

Gold Rate :

ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಗೃಹಲಕ್ಷ್ಮಿಯರಿಗಂತೂ ಚಿನ್ನದ ಮೇಲೆ ಇನ್ನಿಲ್ಲದ ಪ್ರೀತಿ. ಆದರೆ ಇಂತಹ ಗೋಲ್ಡ್‌ ಪ್ರಿಯರಿಗೆ ಇದೀಗ ಬಿಗ್‌ ಶಾಕ್‌ ಎದುರಾಗಿದೆ.

ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗ್ತಲೇ ಇದೆ. ಇದು ಚಿನ್ನ ಖರೀದಿಸುವ ಕನಸು ಕಾಣ್ತಿದ್ದ ಜನರ ಟೆನ್ಶನ್‌ಗೆ ಕಾರಣವಾಗಿತ್ತು. ಆದರೀಗ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಮೂಲಕ ಗ್ರಾಹಕರಿಗೆ ಭರ್ಜರಿ ಶಾಕ್‌ ನೀಡಿದೆ. ಇಷ್ಟು ದಿನ 97,98ರ ಆಸುಪಾಸಿನಲ್ಲಿಯೇ ಮೇಲೆ ಕೆಳಗೆ ಹೋಗ್ತಿದ್ದ ೧೦ ಗ್ರಾಂ ಚಿನ್ನದ ದರ ಇದೀಗ ಸೆಂಚುರಿಯತ್ತ ಮುನ್ನುಗ್ಗುತ್ತಿದೆ. ಬರೋಬ್ಬರಿ ೧ ಲಕ್ಷ ರೂಪಾಯಿಯನ್ನು ಸಮೀಪಿಸಿದೆ. ೧೦ ಗ್ರಾಂ ಚಿನ್ನದ ದರ. ಇಂದು ಒಂದೇ ದಿನ 10 ಗ್ರಾಂ 750 ರೂಪಾಯಿ ಹೆಚ್ಚಾಗಿದ್ದು, 98,330 ರೂಪಾಯಿಗೆ ಮುಟ್ಟಿದೆ. ಈ ಮೂಲಕ ಬಡವನ ಚಿನ್ನ ಕೊಳ್ಳುವ ಆಸೆಗೆ ಬೆಂಕಿ ಬಿದ್ದಂತಾಗಿದೆ.

ದೇಶದಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆಯಾಗುವುದರ ಮೂಲಕ ಮತ್ತೊಮ್ಮೆ ಜನ ಸಾಮಾನ್ಯರಿಗೆ ನಿರಾಸೆ ಮೂಡಿಸಿದೆ. ಬುಧವಾರ ಚಿನ್ನದ ಬೆಲೆ 97,360 ರೂ ಇತ್ತು. ಆದರೆ ಇಂದು 98,330 ರೂಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ 440 ರೂ ಏರಿಕೆ ಕಂಡಿದ್ದು, ಬುಧವಾರ 97,790 ಇದ್ದ ಕೆಜಿ ಬೆಳ್ಳಿಯ ಬೆಲೆ ಗುರುವಾರ 98,230 ರೂ ಆಗಿದೆ. 22 ಕ್ಯಾರೆಟ್‌ ನ 10 ಗ್ರಾಂ ಬಂಗಾರಕ್ಕೆ 1050 ರೂ ಏರಿಕೆ ಆಗುವ ಮೂಲಕ 89,200 ರೂ ಗೆ ತಲುಪಿದೆ. ಇನ್ನು ಚಿನ್ನದ ಆಸೆಯನ್ನು ಬದಿಗಿಟ್ಟು ಜನ ಬೆಳ್ಳಿಯನ್ನಾದರೂ ಕೊಳ್ಳೋಣ ಅಂದರೆ ಅದರ ಬೆಲೆಯು ಕೂಡ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಮದುವೆ ಸೀಸನ್‌ ನಲ್ಲಿಯೇ ಹೀಗೆ ಚಿನ್ನದ ಬೆಲೆ ಗಗನಕ್ಕೇರಿರೋದರಿಂದ ಹೆಣ್ಣು ಹೆತ್ತ ಬಡ ತಂದೆ ತಾಯಿಯಂತೂ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

 

Author:

...
Sushmitha N

Copy Editor

prajashakthi tv

share
No Reviews