ತಿಪಟೂರು :
ಕೆರೆಯ ಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಾರ್ಥವಳ್ಳಿಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದ 11 ವರ್ಷದ ಹೇಮಾಶ್ರೀ ಮೃತ ದುರ್ದೈವಿಯಾಗಿದ್ದಾಳೆ.
ಮೂಲತಃ ಸೊಪ್ಪಿನಹಳ್ಳಿ ಗ್ರಾಮದ ಬಾಲಕಿ ಹೇಮಾಶ್ರೀ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ರಜಾ ದಿನಗಳನ್ನು ಕಳೆಯಲು ತಿಪಟೂರಿನ ಸಾರ್ಥವಳ್ಳಿಯ ಅಜ್ಜಿ ಮನೆಗೆ ಬಂದಿದ್ದಳು, ಬಾಲಕಿ ಕೆರೆ ಬಳಿ ಆಟವಾಡ್ತ ಇದ್ದಾಗ ಆಕಸ್ಮಿಕವಾಗಿ ಮಣ್ಣು ಕುಸಿದು ಹೂಳು ತೆಗೆದ ಕೆರೆ ಹೊಂಡಕ್ಕೆ ಬಿದ್ದು ಮೇಲೆ ಬರಲಾಗದೇ ಸಾವನ್ನಪ್ಪಿದ್ದಾಳೆ. ಇನ್ನು ಕೆರೆಯಲ್ಲಿ ಅವೈಜ್ನಾನಿಕವಾಗಿ ಹೂಳು ತೆಗೆದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸುತ್ತಿದಾರೆ. ಇನ್ನು ವಿಷಯ ತಿಳಿದು ಮೃತ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಲಿದ್ದಾರೆ.