ತುಮಕೂರು:
ಮೇ 13ರಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸಕಲ ತಯಾರಿ ಮಾಡಲಾಗ್ತಿದೆ. ಇನ್ನು ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಪೂರ್ವಭಾಗಿ ಸಭೆಯಲ್ಲಿ ಶಾಸಕರಾದ ಹೆಚ್,ವಿ ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಧರ್ಮದರ್ಶಿಗಳದ ಪಾಪಣ್ಣ, ಎಲ್ಲ ಬ್ಲಾಕ್ ಕಾಂಗ್ರೆಸ್ ಸದಸ್ಯರು ಸೇರಿ ನೂರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ರು. ಸಭೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಗೌರಿಶಂಕರ್ ಮುಂದಿನ ಚುನಾವಣೆ ವೇಳೆ ಕ್ಷೇತ್ರ ಬದಲಿಸ್ತಾರೆ, ಪಕ್ಷ ಬಿಡ್ತಾರೆ ಎಂಬ ಗುಸು ಗುಸು ಕ್ಷೇತ್ರದಲ್ಲಿ ಹರಿದಾಡ್ತಿದ್ದು ಇದಕ್ಕೆ ಸ್ಪಷ್ಟನೆ ನೀಡುವ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ರು. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ, ಕ್ಷೇತ್ರ ಬದಲಿಸಲ್ಲ.. ವಿರೋಧಿಗಳು ಮಾತನಾಡುವುದರ ಬಗ್ಗೆ ತಲೆಕೆಡಿಸಿಕೊಳ್ಳುವ ಮನಸ್ಥಿತಿ ನನ್ನದಲ್ಲ ಎಂದು ಕಿಡಿಕಾರಿದರು.
ಇನ್ನು ಇದೇ ವೇಳೆ ಅಮೆರಿಕಾ ಮಾಡ್ತೀನಿ, ಸಿಂಗಾಪುರ ಮಾಡ್ತೀನಿ ಅಂತಾ ಹೇಳ್ತಿದ್ದವರು 2 ವರ್ಷದಿಂದ ಯಾವುದೇ ಜಾತ್ರೆ, ಕಾರ್ಯಕ್ರಮ, ಸಭೆಗಳಿಗೆ ಹೋಗ್ತಾ ಇಲ್ಲ.. ಅಂತಾ ಸುರೇಶ್ ಗೌಡ ವಿರುದ್ಧ ಕಿಡಿಕಾರಿದರು.
ಅದೇನೆ ಆಗಲಿ, ಗ್ರಾಮಾಂತರ ಕ್ಷೇತ್ರದ ನಾಯಕರ ನಡುವಿನ ಗುದ್ದಾಟ ಮುಂದುವರೆಯುತ್ತಲೆ ಇದೆ. ಮುಂದಿನ ದಿನಗಳಲ್ಲಿ ಗೌರಿಶಂಕರ್ ಕ್ಷೇತ್ರ ಬದಲಿಸ್ತಾರಾ ಅಥವಾ ಪಕ್ಷವನ್ನೇ ಬದಲಿಸ್ತಾರಾ ಎಂದು ಕಾದುನೋಡಬೇಕಿದೆ.