ರಾಯಚೂರು:
ಸೀಟ್ ಗುಡಿಸಲಿನಲ್ಲಿ ಸಿಲಿಂಡರ್ ಸ್ಪೋಟಗೊಂಡು ಸ್ಥಳದಲ್ಲೇ 5 ಕುರಿಗಳು ಸಜೀವ ದಹನವಾಗಿದ್ದು, ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ರಾಯಚೂರು ಜಿಲ್ಲೆಯ ಯಗನೂರು ಗ್ರಾಮದಲ್ಲಿ ನಡೆದಿದೆ.
ಯಗನೂರು ಗ್ರಾಮದ ನರಸಿಂಹಲು ಎಂಬುವವರ ಗುಡಿಸಲಿನಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಗುಡಿಸಲಿನಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಸ್ಪೋಟಗೊಂಡಿದ್ದು, ಗುಡಿಸಲಿನಲ್ಲಿದ್ದ 5 ಕುರಿಗಳು ಬೆಂಕಿಯ ಕೆನ್ನಾಲಗೆಗೆ ಸಜೀವ ದಹನವಾಗಿದ್ದು, ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಗುಡಿಸಲಿನಲ್ಲಿದ್ದ 40 ಸಾವಿರ ರೂ ನಗದು , 5 ಗ್ರಾಂ ಚಿನ್ನದ ಓಲೆ , ಬೆಳ್ಳಿ ಆಭರಣಗಳು ಮತ್ತು ದವಸ ಧಾನ್ಯಗಳು ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.