ಗರಿ-ಗರಿಯಾದ ದಾವಣಗೆರೆ ಬೆಣ್ಣೆ ದೋಸೆ ಕರ್ನಾಟಕದ ಪ್ರಸಿದ್ಧಿ ರೆಸಿಪಿಯಲ್ಲಿ ಒಂದು. ಇಲ್ಲಿಗೆ ಬರುವ ಪ್ರವಾಸಿಗರು ಈ ದೋಸೆಯ ರುಚಿಯನ್ನು ನೋಡದೆ ಬಿಡುವುದಿಲ್ಲ. ಇದು ಮಸಾಲೆ ದೋಸೆಯೆ ತರಹವೆ ಇದ್ದರು ಇದರಲ್ಲಿ ಆಲೂ ಬಾಜಿಯನ್ನು ಬೇರೆ ಇಂದು ಬಟ್ಟಲಿನಲ್ಲಿ ಕೊಡುತ್ತಾರೆ ದೋಸೆಯನ್ನು ಬೆಣ್ಣೆ ಅಥವಾ ತುಪ್ಪ ಹಾಕಿ ತಯಾರಿಸಲಾಗುತ್ತದೆ. ಇದಕ್ಕೆ ಕೊಡುವ ಚಟ್ನಿ ಖಾರವಾಗಿದ್ದು ಈ ದೋಸೆ ಇದರಲ್ಲಿ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ದಾವಣಗೆರೆ ಬೆಣ್ಣೆ ದೋಸೆ ಉತ್ತರ ಕರ್ನಾಟಕದ ದಾವಣಗೆರೆ ನಗರದಲ್ಲಿ ಮೊದಲು ಪರಿಚಯಿಸಲ್ಪಟ್ಟ ಜನಪ್ರಿಯ ದೋಸೆಯಾಗಿದೆ. ದಾವಣಗೆರೆ ಬೆಣ್ಣೆ ದೋಸೆಯಲ್ಲಿ ಬೆಣ್ಣೆ ಬಳಸುವುದು ವಿಶಿಷ್ಟ ರುಚಿ ಮತ್ತು ಪರಿಮಳ ನೀಡುತ್ತದೆ. ಈ ಕಾರಣದಿಂದ ಸಾದಾ ದೋಸೆಗಿಂತ ದಾವಣಗೆರೆ ಬೆಣ್ಣೆ ದೋಸೆಗೆ ಬೇಡಿಕೆ ಹೆಚ್ಚು.
ದಾವಣಗೆರೆ ಬೆಣ್ಣೆ ದೋಸೆಗೆ ಬೇಕಾದ ಹಿಟ್ಟನ್ನು ಇತರ ದೋಸೆ ಹಿಟ್ಟುಗಳಂತೆ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ರಾತ್ರಿಯಿಡಿ ಹುಳಿ ಹಿಡಿದ ದೋಸೆ ಹಿಟ್ಟನ್ನು ಬಿಸಿ ಕಾವಲಿಯ ಮೇಲೆ ಗರಿಗರಿಯಾಗಿ ಹುಯ್ದು ದೋಸೆ ತಯಾರಿಸಲಾಗುತ್ತದೆ. ಬಿಸಿ ಬಿಸಿ ದೋಸೆಯ ಮೇಲೆ ಬೆಣ್ಣೆಯ ತುಣಕನ್ನು ಹಾಕಲಾಗುತ್ತದೆ ಮತ್ತು ದೋಸೆ ಮೇಲ್ಮೈ ಬಿಸಿಯಾಗಿರುವುದರಿಂದ ಬೆಣ್ಣೆಯ ತುಂಡು ಬೇಗನೆ ಕರಗಿ ವಿಶಿಷ್ಟ ಪರಿಮಳ ಮತ್ತು ರುಚಿ ನೀಡುತ್ತದೆ.
ದಾವಣಗೆರೆ ಬೆಣ್ಣೆ ದೋಸೆಯನ್ನು ಕಾಲಿ ಮತ್ತು ಮಸಾಲೆ ದೋಸೆ ಮತ್ತು ಬೆಣ್ಣೆದೋಸೆ ಮತ್ತಿತರ ಮಾದರಿಯಲ್ಲಿ ತಯಾರಿಸಬಹುದಾಗಿದೆ. ದಾವಣಗೆರೆ ಬೆಣ್ಣೆ ದೋಸೆಯನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರಿನೊಂದಿಗೆ ನೀಡಲಾಗುತ್ತದೆ. ದಾವಣಗೆರೆ ಬೆಣ್ಣೆ ದೋಸೆ ದಾವಣಗೆರೆಯಲ್ಲಿ ಜನಪ್ರಿಯವಾಗಿದೆ ಹಾಗು ಅಲ್ಲೇ ಸವಿಯಲು ಪ್ರಯತ್ನಿಸಬಹುದಾಗಿದೆ. ಕರ್ನಾಟಕದ ಅನೇಕ ನಗರಗಳಲ್ಲಿ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗಳಿದ್ದು ದಾವಣಗೆರೆ ಬೆಣ್ಣೆ ದೋಸೆ ಸವಿಯಲು ಸಿಗುತ್ತವೆ.