ತುಮಕೂರು:
ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ ಎಂದು ಮಾಜಿ ಶಾಸಕ ಗೌರಿಶಂಕರ್ ಗಂಭೀರ ಆರೋಪ ಮಾಡ್ತಾ ಇದ್ದಾರೆ. ಅಲ್ದೇ ದಾಖಲೆ ಸಮೇತ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಮಾಜಿ ಶಾಸಕ ಗೌರಿಶಂಕರ್ ಆಗ್ರಹಿಸಿದ್ರು. ಇದಲ್ಲದೇ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ನಡೆಯುತ್ತಿದ್ರು, ಅಕ್ರಮವನ್ನು ತಡೆಯುವ ಬದಲು, ಶಾಸಕ ಸುರೇಶ್ ಗೌಡ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗೌರಿಶಂಕರ್ ಕೆಂಡಾಮಂಡಲರಾಗಿದ್ರು.
ಹೌದು ತುಮಕೂರು ಗ್ರಾಮಾಂತರ ಕ್ಷೇತ್ರದ ಸಣ್ಣ ನೀರಾವರಿ ಇಲಾಖೆಗೆ 1 ಕೋಟಿ ಅನುದಾನ ಬಂದಿದೆ, ಮಾರ್ಚ್ 21ರಂದು ಟೆಂಡರ್‌ನನ್ನು ಅಂತಿಮಗೊಳಿಸಲಾಗಿದೆ. ಆದ್ರೆ ಕೆಲಸ ಮಾಡದೇ ಮಾರ್ಚ್ 13, 2025ರಂದು ಸರ್ಕಾರಕ್ಕೆ ಎರಡು ಬಿಲ್‌ನನ್ನು ಕೂಡ ಸಲ್ಲಿಸಲಾಗಿದೆ, ಕಾಮಗಾರಿ ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳುಗಳಾದ್ರು ಸಮಯ ಬೇಕು, ಆದ್ರೆ ಕೆಲಸ ಮಾಡದೇ 48 ಲಕ್ಷ ಹಾಗೂ 32 ಲಕ್ಷದ ಎರಡು ಬಿಲ್‌ಗಳನ್ನು ಸಲ್ಲಿಸಲಾಗಿದೆ. ಟೆಂಡರ್ ಕೊಟ್ಟು ಒಂದೇ ದಿನಕ್ಕೆ ಬಿಲ್ ಸಲ್ಲಿಕೆಯಾಗಿದೆ. ಕೆಲಸ ಮಾಡದೇ ಬಿಲ್ ಸಲ್ಲಿಸಲು ಹೇಗೆ ಸಾಧ್ಯ ಎಂದು ಮಾಜಿ ಶಾಸಕ ಗೌರಿಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಟೆಂಡರ್‌ನಲ್ಲಿ ಮೂವರು ಭಾಗಿಯಾಗಿದ್ದು, ಕಡಿಮೆ ಮೊತ್ತದ ನಮೂದಿಸಿದ್ದ ವೆಂಕಟೇಗೌಡ ಎಂಬುವವರಿಗೆ ಟೆಂಡರ್ ನೀಡದೇ ಲಿಂಗರಾಜು ಎಂಬುವವರಿಗೆ ಟೆಂಡರ್ ನೀಡಲಾಗಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಕ್ಲಾಸ್ 1 ಕಂಟ್ರಾಕ್ಟರ್ ಕೂಗಿದ್ದ ಟೆಂಡರ್‌ನಲ್ಲಿ ಮೊದಲ ಕಂಟ್ರಾಕ್ಟರ್ ವೆಂಕಟೇಗೌಡ ಟೆಂಡರ್‌ನನ್ನು ಡಿಲೀಟ್ ಮಾಡಿ ಲಿಂಗರಾಜುಗೆ ಟೆಂಡರ್ ಅಪ್ರೂವಲ್ ಮಾಡಿದ್ದಾರೆ. ಇಷ್ಟೆಲ್ಲಾ ಹಗರಣ ನಡೆಯುತ್ತಿದ್ದರು ಗ್ರಾಮಾಂತರ ಶಾಸಕರು ಮಾತ್ರ ಕಣ್ಣಿದ್ದು ಕುರುಡರಾಗಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅವರ ಗಮನಕ್ಕೂ ತರಲಿದ್ದು, ಪ್ರಕರಣದ ತನಿಖೆ ಆಗುವವರೆಗೂ ನಾನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು, ಕೆರೆ ಕಾಮಗಾರಿಗೆ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿಗಳಿಗೆ ಮೀಸಲು ಇಡಲಾಗಿದೆ. ಆದ್ರೆ ನೆಪ ಮಾತ್ರಕ್ಕೆ ಪರಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂತಾ ಮಾತ್ರ ಟೆಂಡರ್ ನಲ್ಲಿ ನಮೂದಿಸಿದ್ದಾರೆ ಆದ್ರೆ ಅದು ಬೇರೆಯವರಿಗೆ ಟೆಂಡರ್ ನೀಡಿದ್ದಾರೆ ಎಂದು ಗೌರಿಶಂಕರ್ ಆರೋಪ ಮಾಡಿದ್ದಾರೆ. ಜೊತೆಗೆ ನಾಗವಲ್ಲಿ, ಕುಚ್ಚಂಗಿ ಕೆರೆ ಕಾಮಗಾರಿ ಮಾಡದೇ ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಮಾಜಿ ಶಾಸಕ ಗೌರಿಶಂಕರ್ ದಾಖಲೆ ಸಮೇತ ದೂರಿದ್ದಾರೆ. ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದ್ರೆ ತಪ್ಪಾಗಿದೆ ಸರ್ ಕ್ಷಮಿಸಿ ಅಂತಾ ಹೇಳ್ತಾರೆ ಎಂತಾ ಮಾಜಿ ಶಾಸಕರು ಕಿಡಿಕಾರಿದ್ದಾರೆ.
ಇದಿಷ್ಟಲ್ಲದೇ ತುಮಕೂರು ಗ್ರಾಮಾಂತರ ಕ್ಷೇತ್ರದ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿ ಕಾಮಗಾರಿ ನಡೆಯುತ್ತಿದ್ದು, ಅದ್ರಲ್ಲಿಯೂ ಅವ್ಯವಹಾರ ನಡೆದಿದೆ. ಕೆಲವು ಕಡೆ ಕಾಮಗಾರಿ ಮಾಡದೇ ಹಳೆಯ ಕಾಮಗಾರಿಯ ಬಿಲ್ ತೋರಿಸಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಗೌರಿಶಂಕರ್ ಕಿಡಿಕಾರಿದ್ದಾರೆ.
ಸದಾ ಅನುದಾನ ಬಂದಿಲ್ಲ ಅಂತಾ ಬೊಬ್ಬೊ ಹೊಡೆದುಕೊಳ್ಳುವ ಸುರೇಶ್‌ಗೌಡ ಅವರ ಕ್ಷೇತ್ರದಲ್ಲೀ ಇಂತಹ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಗೌರಿಶಂಕರ್ ದಾಖಲೆ ಸಮೇತ ಬಯಲಿಗೆಳೆದಿದ್ದು, ಭ್ರಷ್ಟಾಚಾರದ ಹುರುಳು ಯಾರ ಕಾಲಿಗೆ ಸುತ್ತಿಕೊಳ್ಳುತ್ತೋ ಕಾದುನೋಡಬೇಕಿದೆ.