ಮಧುಗಿರಿ:
ಮಧುಗಿರಿ ಪಟ್ಟಣದ ಸಿದ್ದಾಪುರದಲ್ಲಿ ಶ್ರೀ ಕುಡೂತಿ ವೇಣುಗೋಪಾಲ ಸ್ವಾಮಿ ಸಮುದಾಯ ಭವನದ ಉದ್ಘಾಟನೆ ಸಮಾರಂಭವನ್ನ ನೇರವೇರಿಸಲಾಯ್ತು. ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ರು. ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಕುಡೂತಿ ವೇಣುಗೋಪಾಲ ಸ್ವಾಮಿ ಸಮಿತಿ ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವೈದ್ಯ ಡಾ.ಎನ್.ಹೆಚ್. ಹಾಲಪ್ಪ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಭವಿಷ್ಯದಲ್ಲಿ ಮಕ್ಕಳು ಸಧೃಡರಾಗುವಂತೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ, ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸ್ವಯಂ ಉದ್ಯೋಗಸ್ಥರನ್ನಾಗಿ ಮಾಡೋದು ಪೋಷಕರ ಕರ್ತವ್ಯವಾಗಬೇಕು ಎಂದರು. ಅಲ್ದೇ ಶೈಕ್ಷಣಿಕ, ಸಾಮಾಜಿಕ, ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದ್ರು.
ಈ ವೇಳೆ ಕುಂಚಿಟಿಗ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಹಣ, ಆಸ್ತಿ ಮಾಡಿದ್ರೆ ಜೀವನ ಸಾರ್ಥಕವಾಗಲ್ಲ, ಇಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತೆ. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಮುರಳೀಧರ ಹಾಲಪ್ಪರಿಗೆ ಪ್ರಬಲವಾಗಿ ತಾವೆಲ್ಲ ಶಕ್ತಿ ತುಂಬಬೇಕು, ಇನ್ನು ಭವಿಷ್ಯದ ದಿನಗಳಲ್ಲಿ ಮುರಳೀಧರ ಹಾಲಪ್ಪನವರಿಗೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನ ಸಿಗುವಂತಾಗಲಿ ಎಂದರು.