Recipe :
ಸೋಯಾ ಬೀನ್ ಕಬಾಬ್‌ಗಳು ನಾನ್ ವೆಜ್ ಕಬಾಬ್ ಗಿಂತ ಸುವಾಸನೆಯುಕ್ತ ಮತ್ತು ಸಸ್ಯಾಹಾರಿ ಪರ್ಯಾಯವಾಗಿದೆ. ಸೋಯಾ ಕಣಗಳು ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾದ ಈ ಕಬಾಬ್‌ಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಸೋಯಾ ಬೀನ್ ಕಬಾಬ್ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು, ಇದನ್ನು ಮಾಡಲು ಬೇಕಾಗುವ ಪದಾರ್ಥಗಳೆಂದರೆ.
- ಸೋಯಾ ಬೀನ್
- ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ
- ಹಸಿ ಮೆಣಸಿನಕಾಯಿ-2
- ಈರುಳ್ಳಿ- 3
- ಮೊಸರು-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಖಾರದ ಪುಡಿ- ಒಂದು ಚಮಚ
- ಗರಂ ಮಸಾಲ- ಒಂದೂವರೆ ಚಮಚ
- ಕಾಳು ಮೆಣಸಿನ ಪುಡಿ- 1 ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
ಸೋಯಾ ಬೀನ್ ಕಬಾಬ್ ಮಾಡುವ ವಿಧಾನವೆಂದರೆ : ಸೋಯಾ ಬೀನ್ ಅನ್ನು 20-25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಬಳಿಕ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಇದೇ ಮಿಕ್ಸಿ ಜಾರಿಗೆ ನೆನೆಸಿದ ಸೋಯಾ ಬೀನ್ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್. ಖಾರದ ಪುಡಿ, ಗರಂ ಮಸಾಲ, 2 ಚಮಚ ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ. ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮಸಾಲೆಯುಕ್ತ ಸೋಯಾ ಬೀನ್ ನಿಮಗೆ ಬೇಕಾಗ ಆಕಾರದಲ್ಲಿ ತಟ್ಟಿ ಎಣ್ಣೆ ಹಾಕಿ 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಕಬಾಬ್ ಸವಿಯಲು ಸಿದ್ಧ.