ಶಿರಾ : ಶಿರಾದಲ್ಲಿ ಮೊದಲ ಬಾರಿಗೆ ಕುರಿ - ಮೇಕೆ ಮೇಳೆ

ಶಿರಾ : ಮುಸ್ಲಿಂ ಬಾಂಧವರ ಬಕ್ರೀದ್ಹಬ್ಬಕ್ಕೆ ದಿನಗಣನೆ ಶುರುವವಾಗಿದ್ದು, ಎಲ್ಲೆಡೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗ್ತಿದೆ. ಶಿರಾದಲ್ಲಿ ಮುಸ್ಲಿಂ ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು ಬಕ್ರೀದ್ಅಂಗವಾಗಿ ಮೊದಲಬಾರಿಗೆ ಕುರಿ- ಮೇಕೆ ಮೇಳವನ್ನು ಏರ್ಪಡಿಸಲಾಗಿದೆ.

ಹೌದು ಶಿರಾ ನಗರದ ಹಜರತ್ಮಲ್ಲಿಕ್ರೆಹಾನ್ಪಾಷ ದರ್ಗಾ ಬಳಿ ನಾಡಿದ್ದು ಅಂದ್ರೆ ಮೇ 31 ರಿಂದ ಜೂನ್‌ 1ರವರೆಗೆ ಕುರಿ- ಮೇಕೆ ಮೇಳವನ್ನು ಆಯೋಜನೆ ಮಾಡಲಾಗಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಹಯೋಗದೊಂದಿಗೆ ಶಿರಾದಲ್ಲಿ ಮೊಟ್ಟ ಮೊದಲ ಬಾರಿಗೆ ಕುರಿ- ಮೇಕೆ ಮೇಳವನ್ನು ನಡೆಸಲಾಗ್ತಿದೆ.

ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ಮುಖ್ಯ ಕಸುಬಾಗಿದ್ದು, ಕುರಿ ಮಾಂಸಕ್ಕೆ ಫುಲ್ಡಿಮ್ಯಾಂಡ್ಸೃಷ್ಟಿಯಾಗಿದೆ. ಇತ್ತೀಚೆಗೆ ಕುರಿ ಸಾಕಾಣಿಕೆದಾರರು ಬಕ್ರೀದ್ವೇಳೆ ಟಗರು ಮತ್ತು ಹೋತ ಮರಿಗಳನ್ನು ಮಾರಾಟ ಮಾಡಲು ವಿಶೇಷ ಅಸಕ್ತಿ ಹೊಂದಿದ್ದಾರೆ. ಅಲ್ದೇ ಬಕ್ರೀದ್ಗೆ ಕುರಿ ಮಾಂಸಕ್ಕೆ ಫುಲ್ಡಿಮ್ಯಾಂಡ್ಸೃಷ್ಟಿಯಾಗಿದ್ದು ಕುರಿ ಮಾರಾಟಗಾರರು ಹಾಗೂ ಕೊಳ್ಳುವವರು ಮೇಳದಲ್ಲಿ ಭಾಗಿಯಾಗ್ತಿರೋದು ವಿಶೇಷವಾಗಿದೆ. ನೀವು ಕುರಿ ಸಾಕಾಣಿಕೆ ಮಾಡ್ತಾ ಇದ್ದು ಮಾರಾಟ ಮಾಡುವ ಯೋಚನೆಯಲ್ಲಿದ್ರೆ ಮೇಳಕ್ಕೆ ಹೋಗಿ ಮಾರಾಟ ಮಾಡಿ ಲಾಭಗಳಿಸಲು ಇಲಾಖೆ ಅವಕಾಶ ನೀಡಿದೆ.

 

Author:

...
Keerthana J

Copy Editor

prajashakthi tv

share
No Reviews