ದೇಶ: ಗಡಿಯಲ್ಲಿ ಮತ್ತೆ ಗುಂಡಿನ ದಾಳಿ | ಮೂವರು ಲಷ್ಕರ್‌ ಉಗ್ರರ ಹತ್ಯೆ

ದೇಶ :

ಪಾಕ್‌ ಮತ್ತು ಭಾರತದ ನಡುವೆ ಹೇಗೋ ಯದ್ಧ ಕೊನೆಕೊಂಡಿತ್ತು. ಅಬ್ಬ.. ಅಂತ ಪಾಕಿಸ್ತಾನದ ಜನರು ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಇದ್ದರು. ಇತ್ತ ಭಾರತ ದೇಶದ ಜನರು ಕೂಡ ಆರಾಮಾಗಿ ಇದ್ದರು. ಆದರೆ ಈಗ ಮತ್ತೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಲಷ್ಕರ್‌ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಭಾರತೀಯ ಸೇನೆ ಮತ್ತು ಭಯೋತ್ಪದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಲಷ್ಕರ್‌ ಉಗ್ರರನ್ನ ಭಾರತೀಯ ಸೇನೆ ಎನ್‌ಕೌಂಟರ್‌ ಮಾಡಿದೆ.

ದಕ್ಷಿಣ ಕಾಶ್ಮೀರದ ಶೋಫಿಯಾನ್​ ಜಿಲ್ಲೆಯ ​ಕೆಲ್ಲಾರ್‌ನ ಶುಕ್ರೂ ಪ್ರದೇಶದಲ್ಲಿ ಇಂದು ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡಿಯಿತು. ಈ ದಾಳಿಯಲ್ಲಿ ಮೂರು ಲಷ್ಕರ್‌ ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.  ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾದ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿತ್ತು, ಈ ಮಧ್ಯೆ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್‌-ಇ-ತೈಬಾದ ಮೂವರು ಉಗ್ರರನ್ನು ಸಂಹಾರ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್​, ಭಾರತೀಯ ಸೇನೆ ಮತ್ತು ಕೇಂದ್ರ ಪೊಲೀಸ್​ ಮೀಸಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಬೆಳಗ್ಗೆ ಕೆಲ್ಲಾರ್​ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಶೋಧ ನಡೆಯುತ್ತಿತ್ತು.

ಇನ್ನು ಉಗ್ರರು ಅಡಗಿರುವ ಅರಣ್ಯ ಪ್ರದೇಶಕ್ಕೆ ಜಂಟಿ ಕಾರ್ಯಾಚರಣೆ ಪಡೆ ಆಗಮಿಸುತ್ತಿದ್ದಂತೆ, ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಗುಂಡಿನ ದಾಳಿ ನಡೆಸಿವೆ. ಗುಂಡಿನ ಚಕಮಕಿ ಮುಂದುವರೆದಿದ್ದು, ಸ್ಥಳಕ್ಕೆ ಹೆಚ್ಚಿನ ಪಡೆಗಳು ಆಗಮಿಸುತ್ತಿವೆ ಎನ್ನಲಾಗಿದೆ. 

 

Author:

...
Keerthana J

Copy Editor

prajashakthi tv

share
No Reviews