ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳ ಮುಂದೆಯೇ ರೈತ ಆತ್ಮಹತ್ಯೆಗೆ ಯತ್ನ

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
ತುಮಕೂರು

ಶಿರಾ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದರೂ, ಅದು ಸರ್ಕಾರಿ ಭೂಮಿಯ ಒತ್ತುವರಿ ಜಾಗ ಎಂಬುದಾಗಿ ತೆರವುಗೊಳಿಸುವುದಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆಯಲ್ಲಿ ಅಧಿಕಾರಿಗಳ ಮುಂದೆಯೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಲ್ಲು ಕೋಟೆ ಸರ್ವೆ ನಂಬರ್.11‌8 ನ ಜಮೀನಿನಲ್ಲಿ ರೈತ ರಾಮಕೃಷ್ಣ ಕುಟುಂಬದವರು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಈ ಭೂಮಿ ಸರ್ಕಾರಿ ಸ್ವತ್ತಾಗಿದ್ದು, ಅಧಿಕಾರಿಗಳ ಪ್ರಕಾರ 2016ರಲ್ಲಿ ರಾಜೀವ ಗಾಂಧಿ ನಿಯಮಕ್ಕೆ ವರ್ಗಾವಣೆಯಾಗಿದೆ ಎಂದು ತೆರವುಗೊಳಿಸುವುದಕ್ಕೆ ಶಿರಾ ನಗರಸಭೆ ಅಧಿಕಾರಿಗಳು ಸಿಬ್ಬಂಧಿಗಳು ಪೋಲೀಸರ ಜೊತೆಗೂಡಿ ಮುಂದಾಗಿದ್ದರು.

ವೇಳೆಯಲ್ಲಿ ರೈತ ರಾಮಕೃಷ್ಣ ಇತರೆ ಯಾವುದೇ ನೋಟಿಸ್ ನೀಡದೇ ತಮ್ಮ ಜಮೀನು ತೆರವುಗೊಳಿಸೋದಕ್ಕೆ ಬಂದಿದ್ದೀರಿ. ಇದು ಕಾನೂನು ಕ್ರಮದ ಸರಿಯಾದ ನಿರ್ಧಾರವಲ್ಲ. ಜಮೀನಿನಲ್ಲಿ ಹಲವು ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಭೂಮಿಯಲ್ಲಿನ ಕೃಷಿಯ ಆದಾಯವನ್ನೇ ನಂಬಿಕೊಂಡು ಬದುಕುತ್ತಿದ್ದೇವೆ ಎಂದು ಹೇಳಿದರೂ ಅಧಿಕಾರಿಗಳು ಕರಗದೇ ಒತ್ತುವರಿ ಜಮೀನು ತೆರವುಗೊಳಿಸೋದಕ್ಕೆ ಮುಂದಾದ ವೇಳೆಯಲ್ಲಿ ಅವರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೇ ಅವರನ್ನು  ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಿನ್ನೆಲೆಯಲ್ಲಿ ಕೆಲ ರಾಜಕೀಯ ಮುಖಂಡರು ಶಿರಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Author:

share
No Reviews