ಸಿನಿಮಾ:
ನಟ ದರ್ಶನ್ ಡೆವಿಲ್ ಸಿನಿಮಾದ ಸೆಟ್ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿರೋ ಗೆಳೆಯನಿಗೆ ದರ್ಶನ್ ವಿಶೇಷವಾಗಿ ಶುಭಕೋರಿದ್ದಾರೆ.
ಡೆವಿಲ್’ ಚಿತ್ರದ ಶೂಟಿಂಗ್ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಗೆಳೆಯ ಸಚ್ಚಿದಾನಂದನನ್ನು ಡೆವಿಲ್ ಸಿನಿಮಾ ಸೆಟ್ಗೆ ಕರೆಸಿ ಕೇಕ್ ಕಟ್ ಮಾಡಿಸಿದ್ದಾರೆ. ಬರ್ತಡೇ ಸೆಲೆಬ್ರೇಷನ್ ವೇಳೆ ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಭಾಗಿಯಾಗಿದ್ರು.
ಸದ್ಯ ಬರ್ತಡೇ ಆಚರಿಸಿರೋ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ದರ್ಶನ್ ಹೊಸ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಟನ ಸ್ಮಾರ್ಟ್ ಲುಕ್ ನೋಡಿ ದೃಷ್ಟಿ ತೆಗೆರೋ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.