EKKA SONG : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಂಭ್ರಮಾಚರಣೆ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ, 11 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ನಟ ಯುವ ರಾಜ್ಕುಮಾರ್ ಅಭಿನಯದ 'ಎಕ್ಕ' (Ekka Song) ಸಿನಿಮಾದ 'ಬ್ಯಾಂಗಲ್ ಬಂಗಾರಿ' (Bangle Bangari Song) ಹಾಡು ಬಿಡುಗಡೆ ಆಗಿದೆ.
ದೊಡ್ಮನೆ ಕುಡಿ ನಟ ಯುವ ರಾಜ್ಕುಮಾರ್ ಅವರ ಎರಡನೇ ಸಿನಿಮಾ 'ಎಕ್ಕ'ದ 'ಬ್ಯಾಂಗಲ್ ಬಂಗಾರಿ' ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ರಿಲೀಸ್ ಆಗಿದೆ. ಇದರಲ್ಲಿ ನಟಿ ಸಂಜನಾ ಆನಂದ್ ಯುವ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರೇಕ್ಷಕರ ಮನ ಗೆದ್ದಿವೆ.
'ಎಕ್ಕಾ' ಚಿತ್ರತಂಡ ಈ ಹಾಡಿನ ಮೂಲಕ ಸಿನಿಪ್ರೇಮಿಗಳಿಗೆ ವಿಶೇಷ ಬಾಂಧವ್ಯ ನಿರ್ಮಾಣ ಮಾಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ. ಕನ್ನಡದ 'ಎಕ್ಕ' ಸಿನಿಮಾ ಮುಂದಿನ ತಿಂಗಳು ಜುಲೈ 18ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರಾದ PRK, KRG ಮತ್ತು ಜಯಣ್ಣ ಫಿಲ್ಮ್ ಅವರು ನಿರ್ಧರಿಸಿದ್ದಾರೆ.