ಕ್ರಿಕೆಟಿಗ ರಿಂಕು ಸಿಂಗ್ ಹಾಗೂ ಸಂಸದೆ ಪ್ರಿಯಾ ಸರೋಜಾ ನಿಶ್ಚಿತಾರ್ಥ

NEWDELHI: ಟೀಂ ಇಂಡಿಯಾದ ಜನಪ್ರಿಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆ ಎಂಬ ಪವಿತ್ರ ಬಂಧನಕ್ಕೆ ಕಾಲಿಡಲಿದ್ದಾರೆ.

ಲಕ್ನೋದಲ್ಲಿ (Lucknow) ನಡೆದ ಅದ್ಧೂರಿ ಸಮಾರಂಭದಲ್ಲಿ ರಿಂಕು ಸಿಂಗ್, ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಫೋಟೋಗಳು ಹರಿದಾಡುತ್ತಿವೆ. ಇದೇ ಮೊದಲ ಬಾರಿಗೆ ಕ್ರಿಕೆಟ್‌ ತಾರೆಯೊಬ್ಬರು ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕಿ ಜೊತೆ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದು ವಿಶೇಷವಾಗಿದೆ. ಭಿನ್ನ ಕ್ಷೇತ್ರದ ಈ ಇಬ್ಬರೂ ತಾವು ಒಬ್ಬರನ್ನೊಬ್ಬರು ಆರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ.

ರಿಂಕು ಸಿಂಗ್, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ತೋರಿದ ವೈಖರಿ ಹಾಗೂ ಪ್ರದರ್ಶನದ ಮೂಲಕ ಯುವಕರ ಹೀರೋ ಆಗಿದ್ದಾರೆ. ಪ್ರಿಯಾ ಸರೋಜಾ, ಸಮಾಜವಾದಿ ಪಕ್ಷದಿಂದ ಸಂಸದೆಯಾಗಿರುವ ಇವರು ಯುವ ರಾಜಕಾರಣಿಗಳಲ್ಲಿ ಪ್ರಭಾವಶಾಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇವರ ನಿಶ್ಚಿತಾರ್ಥ ಸಮಾರಂಭವು ಕೇವಲ ಕುಟುಂಬಸ್ಥರು ಆತ್ಮೀಯರ ಸಮ್ಮುಖದಲ್ಲಿ ನೆರವೇರಿದ್ದು, ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು.  ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಹಾರೈಕೆ ವ್ಯಕ್ತಪಡಿಸುತ್ತಿದ್ದು, "ಕ್ರಿಕೆಟ್ ಮತ್ತು ರಾಜಕೀಯದ ಎರಡೂ ಲೋಕಗಳ ಒಂದಾಗುವ ಕ್ಷಣ" ಎಂದು ಕೊಂಡಾಡುತ್ತಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews