ತಮಿಳುನಾಡು : ಚಾಲಕನಿಗೆ ಬಸ್ ಚಲಾಯಿಸುವಾಗ ಹೃದಯಾಘಾತ | ಪ್ರಯಾಣಿಕರನ್ನು ರಕ್ಷಿಸಿದ ಕಂಡಕ್ಟರ್‌

ತಮಿಳುನಾಡು : ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದ ಸಮಸ್ಯೆ ಹೆಚ್ಚುತ್ತಿದೆ. ನಿನ್ನೆಯಷ್ಟೇ ಪತ್ನಿಯ ಸಿಮಂತ ಸಂಭ್ರಮದಲ್ಲೇ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಇದೀಗ ಮತ್ತೊಂದು ಅಂತಹದ್ದೇ ಹೃದಯಾಘಾತದ ಪ್ರಕರಣವೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಖಾಸಗಿ ಬಸ್ ಚಾಲಕನೊಬ್ಬ ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದ್ದು, ಸಮಯಪ್ರಜ್ಞೆ ಪ್ರದರ್ಶಿಸಿದ ಕಂಡಕ್ಟರ್ ಬಸ್ ನಿಲ್ಲಿಸಿ ಸಂಭವಿಸಬಹುದಾದ ಭೀಕರ ಅಪಘಾತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ಇಂದು ಈ ಘಟನೆ ನಡೆದಿದ್ದು, ಖಾಸಗಿ ಬಸ್‌ ಪಳನಿ ಬಸ್‌ ನಿಲ್ದಾಣದಿಂದ ಪುದುಕೊಟ್ಟೈಗೆ ಪ್ರಯಾಣಿಸುತ್ತಿದ್ದ ವೇಳೆ  ಚಾಲಕ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. 

ಈ ಸಂದರ್ಭದಲ್ಲಿ ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಕಂಡಕ್ಟರ್ ತಕ್ಷಣವೇ ಬ್ರೇಕ್ ಹಿಡಿದು ಬಸ್‌ನ್ನು ನಿಲ್ಲಿಸಿದರು. ನಂತರ ಚಾಲಕನಿಗೆ ಸಹಾಯ ಮಾಡಲು ಪ್ರಯಾಣಿಕರೂ ಮುಂದಾದರು. ಇನ್ನು ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Author:

...
Keerthana J

Copy Editor

prajashakthi tv

share
No Reviews