ಶಿರಾ:
ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಸುಮ್ಮನೆ ಕೂರಲ್ಲ ಅಂತಾ ಮತ್ತೆ ಮತ್ತೆ ಸಾಬೀತು ಮಾಡ್ತಾನೆ ಇದೆ.. ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇರೋ ಪ್ರಜಾಶಕ್ತಿ, ಜನರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಲುಪಿ, ಸಮಸ್ಯೆ ಪರಿಹರಿಸುವವರೆಗೂ ನಿರಂತರವಾಗಿ ವರದಿ ಮಾಡ್ತಾನೆ ಜನಮನ್ನಣೆ ಪಡೆದುಕೊಳ್ತಿದೆ.. ಹೌದು ಶಿರಾ ತಾಲೂಕಿನ ಹಳ್ಳಿಗಳಲ್ಲಿ ನಾನಾ ಸಮಸ್ಯೆಗಳು ತಾಂಡವ ಆಡ್ತಾ ಇದ್ದು, ಈ ಬಗ್ಗೆ ಸುದ್ದಿ ಮಾಡ್ತಾ ಇದ್ದಂತೆ ಅಧಿಕಾರಿಗಳು ಓಡೋಡಿ ಬಂದಿದ್ದಾರೆ.
ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಪಿಕುಂಟೆ ಗ್ರಾಮದ ಕಿರುನೀರು ಸರಬರಾಜು ಘಟಕ ಅವ್ಯವಸ್ಥೆಯಿಂದ ಕೂಡಿದ್ದು, ನೀರು ಅನಾವಶ್ಯಕವಾಗಿ ಪೋಲಾಗ್ತಾ ಇತ್ತು. ಮೊದಲೇ ನೀರಿನ ಸಮಸ್ಯೆ ಹೆಚ್ಚಾಗಿದ್ದು ಈ ರೀತಿ ನೀರು ವ್ಯರ್ಥವಾದ್ರೆ ನೀರಿನ ಸಮಸ್ಯೆ ಹೆಚ್ಚಾಗುತ್ತೆ ಎಂದು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ್ರು ಕ್ಯಾರೇ ಅಂತಾ ಇರಲಿಲ್ಲ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಭಾನುವಾರ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರ ಬೆನ್ನಲ್ಲೇ ನಿನ್ನೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪೋಲಾಗ್ತಿರೋ ನೀರನ್ನು ನಿಲ್ಲಿಸುವ ಕೆಲಸ ಮಾಡಿದ್ರು.
ಇತ್ತ ಶಿರಾ ನಗರದ 30ನೇ ವಾರ್ಡ್ನಲ್ಲಿ ಮ್ಯಾನ್ ಹೋಲ್ ಕಟ್ಟಿಕೊಂಡಿದ್ದರಿಂದ ಯುಜಿಡಿ ನೀರು ರಸ್ತೆ ಮೇಲೆ ಹರಿದು ದರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇತ್ತು. ಈ ಬಗ್ಗೆ ಪ್ರಜಾಶಕ್ತಿ ಟಿವಿ ನಿನ್ನೆ ವರದಿ ಬಿತ್ತರಿಸಿದ್ದು, ವರದಿ ಮಾಡಿ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ದೌಡಾಯಿಸಿ ಸರಿಪಡಿಸುವ ಕೆಲಸ ಮಾಡಿದ್ರು.
ಶಿರಾ ತಾಲೂಕಿನ ಮನೆ, ಮನಸ್ಸಿನಲ್ಲೂ ಪ್ರಜಾಶಕ್ತಿ ಮನೆ ಮಾತಾಗಿದ್ದು, ಸುದ್ದಿ ಬೆನ್ನಲ್ಲೇ ಅಧಿಕಾರಿಗಳು ಸ್ಪಂದಿಸಿ ಪರಿಹರಿಸುತ್ತಿದ್ದು ಪ್ರಜಾಶಕ್ತಿ ಟಿವಿಗೆ ಅಭಿನಂದನೆ ಸಲ್ಲಿಸ್ತಾ ಇದ್ದಾರೆ.