SIRA: ಭೂ ಸ್ವಾಧೀನ ಪ್ರಕ್ರಿಯೆಯ ಪರಿಹಾರ ನಿಗಧಿಯಲ್ಲಿ ತಾರತಮ್ಯ

ಶಿರಾ: 

ತುಮಕೂರು ನಗರದ ಹೊರವಲಯದ ವಸಂತನರಸಾಪುರ  ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಿದ್ದು, 5ನೇ ಹಂತದ ಅಭಿವೃದ್ಧಿಗೆ  KIADB ಮುಂದಾಗಿದ್ದು ರೈತರ ಜಮೀನನ್ನು ಭೂ ಸ್ವಾಧೀನ ಪಡೆಸಿಕೊಂಡಿದೆ.. ಆದ್ರೆ ಭೂ ಸ್ವಾದೀನ ಪಡೆದ ರೈತರಿಗೆ ಪರಿಹಾರ ಹಣವನ್ನು ಸರಿಯಾಗಿ ನಿಗಧಿ ಮಾಡಿಲ್ಲ ಎಂದು ರೈತರು ಸಭೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ರು.

ಸಭೆಯಲ್ಲಿ ಎಚ್ ಎನ್ ರಾಜಣ್ಣ.ಕಾಮರಾಜು ನಿವೃತ್ತ ಸಹಾಯಕ ನಿರ್ದೇಶಕ ಪರಮೇಶ್, ಕಾಳಯ್ಯ,  ನಟರಾಜ್ ನೆಲಹಾಲ್,ಸಿದ್ದಲಿಂಗಪ್ಪ. ಪ್ರಕಾಶ್ ಸೇರಿ ಹಲವು ಮಂದಿ ರೈತ ಮುಖಂಡರು ಭಾಗಿಯಾಗಿದ್ರು,

ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ, ಹುಂಜನಾಳು, ಸೀಬಯ್ಯನಪಾಳ್ಯ, ಕಾಳಜ್ಜ ರೊಪ್ಪ , ಪಿಲ್ಲಹಳ್ಳಿ, ಬಸರಿಹಳ್ಳಿ, ಅಮ್ಮನಹಟ್ಟಿ . ಬ್ಯಾಡರಹಳ್ಳಿಯಲ್ಲಿ ರೈತರ ಜಮೀನನ್ನು ಪಡೆದುಕೊಂಡಿದೆ. ಆದ್ರೆ ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ KIADB ಸಮಾನವಾಗಿ ಪರಿಹಾರ ಹಂಚಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು.

ಇನ್ನು ತುಮಕೂರು ತಾಲೂಕಿನ ನೆಲಹಾಳ್‌, ಚಿಕ್ಕ ಸೀಬಿ ವ್ಯಾಪ್ತಿಯ ಸರ್ವೇ ನಂಬರ್‌ಗಳಿಗೆ ಕೆ.ಐ ಡಿ.ಜಿಯವರು ಹೆಚ್ಚಿನ ಹಣವನ್ನು ನೀಡಿದ್ದು ಉಳಿದ ಜಮೀನಿಗೆ ಕಡಿಮೆ ಪರಿಹಾರನ್ನು ನಿಗದಿ ಮಾಡಿದೆ. ಹೀಗಾಗಿ ರೈತರು ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ ಒಂದೇ ರೀತಿಯ ಪರಿಹಾರದ ಹಣವನ್ನು ನಿಗದಿ ಮಾಡಬೇಕೆಂದು ರೈತರು ಆಗ್ರಹಿಸಿದ್ರು.

 

Author:

...
Sub Editor

ManyaSoft Admin

Ads in Post
share
No Reviews