ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ರೀಷ್ಮಾ ನಾಣಯ್ಯಗೆ ಸೆಟ್ ಆಗಲ್ಲ ಹೋಗೆ ನಂಗು ನಿಂಗು ಎನ್ನುತ್ತಾ ಧ್ರುವ ಸರ್ಜಾ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಸಾಂಗ್ ಸಖತ್ ಕ್ರೇಜಿ ಆಗಿ ಮೂಡಿ ಬಂದಿದ್ದು, ಪ್ಯಾನ್ಸ್‌ಗೆ ಇಷ್ಟ ಆಗಿದೆ. ಧ್ರುವ ಮತ್ತು ನಾಯಕಿ ರೀಷ್ಮಾ KD ಸಿನಿಮಾದ ಸೆಟ್ ಆಗೋಲ್ಲ ಹೋಗೆ ನಂಗು ನಿಂಗು ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಹಾಡನ್ನು ಪ್ರೇಮ್ ಬರೆದಿದ್ದು, ಮಿಕಾ ಸಿಂಗ್ ಸೊಗಸಾಗಿ ಹಾಡಿದ್ದಾರೆ. ಸಿನಿಮಾದಲ್ಲಿನ ರಿಯಲ್ ಲುಕ್ ರಿವೀಲ್ ಮಾಡದೆ ಇಬ್ಬರೂ ಟ್ರ್ಯಾಕ್ ಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡನ್ನು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಈಗೀನ ಜನರೇಷನ್ ಯೂತ್ಸ್‌ಗೆ ಹಾಡು ಕನೆಕ್ಟ್ ಆಗೋ ವಿಭಿನ್ನವಾಗಿ ಸಾಂಗ್ ಮಾಡಿದ್ದಾರೆ.
ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ಜೊತೆ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ನೋರಾ ಫತೇಹಿ ನಟಿಸಿದ್ದಾರೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ರಿವೀಲ್ ಮಾಡಲಿದೆ. ಇನ್ನು ಈ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.