ಧಾರವಾಡ:
ಬೇಸಿಗೆ ಆರಂಭವಾಗ್ತಿದ್ದಂತೆ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇವೆ. ಇದೀಗ ಕಸಕ್ಕೆ ಬಿದ್ದ ಬೆಂಕಿಯಿಂದಾಗಿ ಅಂಬ್ಯುಲೆನ್ಸ್ ಒಂದು ಬೆಂಕಿಯ ತೀವ್ರತೆಗೆ ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ಜಿಲ್ಲೆಯ ಜಿಲ್ಲಾಸ್ಪತ್ರೆ ಸಿಬ್ಬಂದಿ ವಸತಿ ಗೃಹ ಬಳಿ ನಡೆದಿದೆ.
ಯಾರೋ ಅಪರಿಚಿತರು ಆಸ್ಪತ್ರೆ ಆವರಣದಲ್ಲಿದ್ದ ಕಸಕ್ಕೆ ಬೆಂಕಿ ಹಾಕಿದ್ದಾರೆ, ಇದರ ಪರಿಣಾಮ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಅಂಬುಲೆನ್ಸ್ ಗೆ ಬೆಂಕಿ ವ್ಯಾಪಿಸಿದ್ದು, ಇನ್ನು ಬೆಂಕಿಯ ಕೆನ್ನಾಲಗೆಗೆ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇನ್ನು ವಿಷಯ ತಿಳಿದು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಬೆಂಕಿ ಇಟ್ಟ ಕಿಡಿಗೇಡಿಗಳು ಯಾರೆಂದು ಪತ್ತೆಯಾಗಿಲ್ಲ. ಸದ್ಯ ಬೆಂಕಿ ಅನಾಹುತದಿಂದ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.