ಹಿಂದಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ಕಕ್ಕರ್‌ಗೆ ಕ್ಯಾನ್ಸರ್

BOLLYWOOD : ಹಿಂದಿ ಕಿರುತೆರೆಯ ಜನಪ್ರಿಯ ನಟಿ ಹಾಗೂ “ಸಸುರಾಲ್ ಸಿಮರ್ ಕಾ” ಧಾರಾವಾಹಿಯಿಂದ ಮನೆಮಾತಾದ ದೀಪಿಕಾ ಕಕ್ಕರ್  ಅವರಿಗೆ 2ನೇ ಹಂತದ ಲಿವರ್ ಕ್ಯಾನ್ಸರ್ ಪತ್ತೆಯಾಗಿರುವುದು ಶಾಕ್ ಸುದ್ದಿಯಾಗಿದೆ. ಈ ವಿಚಾರವನ್ನು ಖುದ್ದಾಗಿ ದೀಪಿಕಾ ತಮಗೆ ತಾನೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾಳೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮತ್ತು ಪೋಸ್ಟ್ ಮೂಲಕ ದೀಪಿಕಾ ಅವರು ತಮ್ಮ ಆಧ್ಯಾತ್ಮಿಕ ಧೈರ್ಯ ಮತ್ತು ಪಾಸಿಟಿವ್ ಮನಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. “ನಿಮಗೆಲ್ಲಾ ಗೊತ್ತಿರುವಂತೆ ಕಳೆದ ಕೆಲವು ವಾರಗಳು ನನಗೆ ತುಂಬಾ ಕಷ್ಟಕರವಾಗಿತ್ತು. ಹೊಟ್ಟೆಯ ಮೇಲ್ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದಾಗ ಲಿವರ್‌ನಲ್ಲಿ ಟೆನ್ನಿಸ್ ಚೆಂಡಿನ ಗಾತ್ರದ ಗಡ್ಡೆ ಕಂಡುಬಂದಿತು. ನಂತರ ಡಾಕ್ಟರ್‌ಗಳು 2ನೇ ಹಂತದ ಕ್ಯಾನ್ಸರ್ ಎಂದು ದೃಢೀಕರಿಸಿದರು,” ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು, ಸಹ ನಟರು, ಟೆಲಿವಿಷನ್ ಕ್ಷೇತ್ರದ ಹಲವರು ದೀಪಿಕಾಗೆ ಧೈರ್ಯ ತುಂಬುತ್ತಿದ್ದಾರೆ.“ನೀವು ಮೊದಲೇ ಸಿಂಹಿಯಂತೆ ಇರುತ್ತೀರಾ ದೀಪಿಕಾ, ಈ ಮೊದಲು ಬಿಗ್ ಬಾಸ್ ಗೆದ್ದಿದ್ದೀರಿ, ಈಗ ಜೀವನದ ಈ ಪಾಠವನ್ನೂ ಗೆಲ್ಲುತ್ತೀರಿ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Author:

...
Keerthana J

Copy Editor

prajashakthi tv

share
No Reviews