ಕಳೆದ ಜನವರಿ 29 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ಭಾರಿ ಕಾಲ್ತುಳಿತದಿಂದ ಹಲವು ಜನರು ಸಾವನಪ್ಪಿದ್ದರು. ಅದರಲ್ಲಿ ಕರ್ನಾಟಕದ ನಾಲ್ಕು ಜನ ಸಾವನಪ್ಪಿದ್ದರು. ಆದರೆ ಇದೀಗ ಮತ್ತೊಂದು ಘಟನೆ ನಡೆದಿದೆ.
ಹೌದು ಕುಂಭಮೇಳದಲ್ಲಿ ರಾಜ್ಯದ ಮತ್ತೋರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಸಾವನ್ನಾಪ್ಪಿದ್ದಾರೆ, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬರಗೂರು ಮೂಲದ 57 ವರ್ಷ ವಯಸ್ಸಿನ ನಾಗರಾಜು ಎಂಬುವರು ಮಂಗಳವಾರ ಸಂಜೆ ಕುಂಭಮೇಳದಲ್ಲಿ ಸಂಧ್ಯಾವಂದನೆ ಮುಗಿಸಿ ಪುಣ್ಯ ಸ್ನಾನ ಮಾಡುವಾಗ ಹಠಾತ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನಾಗರಾಜು ಬರಗೂರು ಗ್ರಾಮದ ನಿವಾಸಿಯಾಗಿದ್ದು, ಇವರು ಬರಗೂರಿನ ಎಲ್ ಎನ್ ಪಿ ಬ್ರಿಕ್ಸ್ ನ ಮಾಲೀಕರಾಗಿದ್ದಾರೆ. ಇನ್ನು ನಾಗರಾಜ್ ರವರ ನಿಧನಕ್ಕೆ ಬರಗೂರಿನ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.